ಕಮತಗಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲಿಯುಗದ ಕಾಮಧೇನು ಶ್ರೀ ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವವು
ಇದೆ ಆಗಸ್ಟ 10 ರಿಂದ 12 ರ ವರೆಗೆ ನಡೆಯಲಿದ್ದು ದಿ. 08 ರಂದು ಸಾಯಂಕಾಲ ಧ್ವಜಾರೋಹಣ. ಗೋಪೂಜೆ. ಧಾನ್ಯ ಪೂಜೆ. ಆಗಸ್ಟ 09 ರಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದ್ದು. ದಿ. 10 ಪೂರ್ವಾರಾಧನೆ. 11 ರಂದು ಮಧ್ಯಾರಾಧನೆ 12 ರಂದು ಉತ್ತರಾರಾದನೆ ನಡೆಯಲಿದ್ದು ನಿತ್ಯವು ಬೃಂದಾವನಕ್ಕೆ ಕಾಕಡಾರತಿ. ಪಂಚಾಮೃತ ಅಭಿಷೇಕ. ವಿಶೇಷ ಪೂಜೆಗಳು ಧಾರ್ಮಿಕ ವಿಧಿ ವಿಧಾನಗಳಂತೆ ಜರುಗುವವು. ಕಾರಣ ಭಕ್ತರು ಈ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ತನು ಮನ ಧನದಿಂದ ಸೇವೆ ಸಲ್ಲಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಸೇವೆ ಸಲ್ಲಿಸಬಯಸುವವರು : ಅಧ್ಯಕ್ಷರು ಶ್ರೀ ರಾಘವೇಂದ್ರ ಸ್ವಾಮಿ ಮಠ ಕಮತಗಿ ಕೆನರಾ ಬ್ಯಾಂಕ್ ಅಕೌಂಟ್ ನಂಬರ 0536101003805 IFSC code: CNRB0000536 ಮೂಲಕ ಹಣ ಸಂದಾಯ ಮಾಡಬಹುದಾಗಿದೆ.🙏🏻
ವರದಿ - ಶಂಕರ್ ವನಕಿ ಕಮತಗಿ