#Today News Sir
ಜಗತ್ತಿನ ಮಾನ ಕಾಪಾಡಿದ ಜನಾಂಗ ದೇವಾಂಗದವರು ಸಂಘಟಿತರಾಗಿ - ಶಾಸಕ ಕಾಶಪ್ಪನವರ ಕರೆ
ಇಲಕಲ್ಲ - ಜಗತ್ತಿನ ಮಾನ ರಕ್ಷಣೆ ಮಾಡಲು ಬಟ್ಟೆ ನೇಯ್ದ ದೇವಾಂಗ ಮೂಲ ಪುರುಷ ದೇವಲ ಮಹರ್ಷಿ ಮತ್ತು ದೇವರದಾಸಿಮಯ್ಯನವರ ಜನಪರ ಚಿಂತನೆ ಮತ್ತು ನೇಕಾರಿಕೆ ಮೂಲವೃತ್ತಿಯನ್ನು ಇಡಿ ಜಗತ್ತಿಗೆ ಪಸರಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ.
ದೇವಾಂಗ ಬಾಂಧವರು ಸಂಘಟಿತರಾಗಿ ಮತ್ತು ಸಮಾಜವನ್ನು ಭಲಪಡಿಸಿಕೊಳ್ಳಬೇಕು, ನೇಕಾರರಿಗಾಗಿ ಸರಕಾರ ರೂಪಿಸಿರುವ ಯೋಜನೆಗಳನ್ನು ಬಳಸಿಕೊಳ್ಳಬೇಕು
ಎಂದು ಹುನಗುಂದ ಮತಕ್ಷೇತ್ರದ ಶಾಸಕ ಡಾ. ವಿಜಯಾನಂದ ಎಸ್ ಕಾಶಪ್ಪನವರ ಅವರು ಇಲಕಲ್ಲನ ಆರ್ ವೀರಮನಿ ಸಾಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟ ಜಿಲ್ಲಾ ದೇವಾಂಗ ಸಂಘ ನೌಕರರ ಸಂಘ, ಇಲಕಲ್ಲ ತಾಲೂಕಾ ದೇವಾಂಗ ಮತ್ತು ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ. ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ನಮ್ಮ ಸಮಾಜದವರು ರಾಜಕೀಯವಾಗಿ ಆರ್ಥಿಕವಾಗಿ ಬಲಗೊಳ್ಳಬೇಕು ಮತ್ತು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಪಡೆಯವಯವವಾಬೇಕು ಸಮಾಜಮುಖಿ ಕೆಲಸ ಮಾಡಿ ಸಮಾಜಕ್ಕೆ ಕೊಡುಗೆ ನೀಡಿ ಮುಂದಿನ ನಮ್ಮ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಹೇಳಿದರು. ಹಾಗೂ ನಮ್ಮ ದೇವಾಂಗ ಜನಾಂಗ ಸುಮಾರು 30 ಲಕ್ಷಕ್ಕಿಂತಲು ಹೆಚ್ಚು ಇದೆ ಒಬ್ಬ MLA ಅಥವಾ MP ಇಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು. ಅದಕ್ಕಾಗಿ ನಮ್ಮ ಜನಾಂಗ ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕು ಸಮಾಜದ ಮುನ್ನೆಲೆಗೆ ಬರಬೇಕು ಎಂದರು.
ದೇವಾಂಗ ಜಗದ್ಗುರುಗಳಾದ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಸಮಾಜ ನಿಂತ ನೀರಾಗಬಾರದು ಸದಾ ಹರಿಯುವ ನೀರಾಗಬೇಕು ಸಾಗರದಂತೆ ಬೃಹತ್ತಾಗಿ ಬೆಳೆಯಬೇಕು ವಿದ್ಯಾರ್ಥಿಗಳಿಗೆ ತಂದೆ ತಾಯಿಯರು ಉತ್ತಮ ಶಿಕ್ಷಣ ಕೊಡಿಸಿ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ನುಡಿದರು. ಹಾಗೂ ಸರಕಾರ ನಡೆಸಲಿರುವ ಜಾತಿ ಜನಗಣತಿಯಲ್ಲಿ ನಿಖರವಾದ ಮಾಹಿತಿ ನೀಡಬೇಕು ಎಂದು ಹೇಳಿದರು
ಬಾಗಲಕೋಟ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸತೀಶ ಸಪ್ಪರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಸಾಧಕರಿಗೆ ದೇವಾಂಗ ಕುಲಭೂಷಣ ಪ್ರಶಸ್ತಿ, ದೇವಲ ಮಹರ್ಷಿ ಸಮಾಜ ಸೇವಾ ಪ್ರಶಸ್ತಿ, ದೇವಲ ಮಹರ್ಷಿ ಕಲಾ ಶ್ರೀ ಪ್ರಶಸ್ತಿ, ವೈದ್ಯ ದಂಪತಿಗಳಿಗೆ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಿನೇಶ ಗಿಡ್ನಂದಿ, ಕಮತಗಿ ಪಪಂ ಅಧ್ಯಕ್ಷ ಬಸವರಾಜ ಕುಂಬಳಾವತಿ ಕೆರೂರ ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಗೋಪಾಲ ಮಾಡಬಾಳ, ಹೇಮಂತ ದುತ್ತರಗಿ, ಬಸವರಾಜ ವಡೋಡಗಿ ಸೇರಿದಂತೆ ಬಾಗಲಕೋಟ, ಇಲಕಲ್ಲ, ಅಮೀನಗಡ, ಸುಳೇಭಾವಿ, ಶಿರೂರ, ಗುಳೇದಗುಡ್ಡ, ಕೆರೂರ, ನಾಗರಾಳ, ದೇವಾಂಗ ಸಭಾಜದ ಹಿರಿಯರು ಯುವಕರು ಮಹಿಳೆಯರು ಹಾಜರಿದ್ದರು
ವರದಿ - ✍️ ಶಂಕರ್ ವನಕಿ ಕಮತಗಿ