ನಂಬಿಕೆ ಮತ್ತು ಸದಸ್ಯರ ಬೆಂಬಲವೇ ಸಹಕಾರ ಸಂಘದ ಬೆಳವನಿಗೆಗೆ ಆಧಾರ



ನಂಬಿಕೆ ಮತ್ತು ಸದಸ್ಯರ ಬೆಂಬಲವೇ ಸಹಕಾರ ಸಂಘದ ಬೆಳವನಿಗೆಗೆ ಆಧಾರ

ಸಂಘದ ಅಧ್ಯಕ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮುರುಗೇಶ ಕಡ್ಲಿಮಟ್ಟಿ 


ಕಮತಗಿ: ನಂಬಿಕೆ ಮತ್ತು ಸದಸ್ಯರ ಬೆಂಬಲವೇ ಸಹಕಾರ ಸಂಘದ ಬೆಳವಣಿಗೆಗೆ ಆಧಾರ ಎಂದು ಹೊಳೆ ಹುಚ್ಚೇಶ್ವರ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಮುರಗೇಶ ಆಯ್ ಕಡ್ಲಿಮಟ್ಟಿ ಹೇಳಿದರು.


ಸಂಘದ 35ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು “1989-90ರಲ್ಲಿ ರೂ. 2.5 ಲಕ್ಷ ಬಂಡವಾಳದಲ್ಲಿ ಆರಂಭವಾದ ಸಂಘವು, ಈಗ ರೂ. 4.98 ಕೋಟಿ ಲಾಭ ಗಳಿಸಿದೆ” ಎಂದು ಪ್ರಗತಿಯ ವಿವರವನ್ನು ನೀಡಿದರು.


ಜನವರಿ 4ರಂದು ಸಂಘದ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಅವಿರೋಧವಾಗಿ ಪುನರಾಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.  


ಸಂಘದ ಕಮತಗಿ ಕೇಂದ್ರ ಕಛೇರಿ,  ಗದ್ದನಕೇರಿ ಕ್ರಾಸ್, ಗುಳೇದಗುಡ್ಡ,  ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ, ರಾಂಪೂರ ಪು.ಕೆ ಕಮತಗಿ ಬಜಾರ್ ಶಾಖೆ,  ಸ್ವಂತ ಕಟ್ಟಡಗಳು ಕಾಮಗಾರಿ ಪ್ರಗತಿಯಲ್ಲಿವೆ ಮುಂದಿನ ವರ್ಷ ಶಾಖೆಗಳ ಉದ್ಘಾಟನೆ ನಿರೀಕ್ಷಿಸಲಾಗಿದೆ. ಜೊತೆಗೆ ಹೊಳೆಆಲೂರು, ಹನುಮನಾಳ, ಶಾಖೆಗಳು ಸ್ವಂತ ನಿವೇಶನ ಹೊಂದಿದೆ ಎಂದು ಹೇಳಿದರು 



ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೋಮಾ, ಪದವಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೆ ಸಂಧರ್ಭದಲ್ಲಿ ಸದಸ್ಯರ ಮೃತ ಕುಟುಂಬಗಳಿಗೆ ಮರಣೋತ್ತರ ನಿಧಿ ವಿತರಿಸಲಾಯಿತು..

ಈ ಕಾರ್ಯಕ್ರಮದಲ್ಲಿ ಇಲಕಲ್ಲ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಸತೀಶ ಸಪ್ಪರದ ಸೊಸಾಯಿಟಿಯ ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ನಿರ್ದೇಶಕರಾದ ಮಲ್ಲಪ್ಪ ಲೆಕ್ಕದ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹನಮಂತ ಕಡಿವಾಲ, ಹುಚ್ಚಪ್ಪ ಸಿಂಹಾಸನ, ಹುಚ್ಚೇಶ ಗೋಕಾವಿ, ಮಹಾಂತೇಶ ಕಡ್ಲಿಮಟ್ಟಿ, ರೇವಣಕುಮಾರ ಭಾಪ್ರಿ, ಬಸವ್ವ ಕೋಳೂರ, ಸುಧಾ ಕ್ಯಾದಿಗ್ಗೇರಿ, ಹನಮಂತ ವಡ್ಡರ, ಪ್ರಧಾನ ವ್ಯವಸ್ಥಾಪಕ ಶಿವಶಂಕರ್ ಮಾಶೆಟ್ಟಿ, ಉಪಪ್ರಧಾನ ವ್ಯವಸ್ಥಾಪಕ ಸದಾಶಿವ ಕಡ್ಲಿಮಟ್ಟಿ, ಆಡಳಿತ ಸಲಹೆಗಾರರಾದ ಪಂಪಣ್ಣ ಪರಗಿ, ಸುರೇಶ ಕಟ್ಟಿಮನಿ, ಸೇರಿದಂತೆ ಎಲ್ಲ 16  ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಸಲಹಾ ಸಮಿತಿ ಸದಸ್ಯರು ಸಂಘದ ಸದಸ್ಯರು ಉಪಸ್ಥಿತರಿದ್ದರು


ವರದಿ -✍️ ಶಂಕರ್ ವನಕಿ ಕಮತಗಿ (ಬಾಗಲಕೋಟ)

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು