ಶ್ರೀ ಹುಚ್ಚೇಶ್ವರ ಕೋ - ಆಪ್ ಕ್ರೆಡಿಟ್ ಸೊಸೈಟಿಗೆ 4.98 ಕೋಟಿ ನಿವ್ವಳ ಲಾಭ
ಕಮತಗಿ - ಶ್ರೀ ಹುಚ್ಚೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಗೆ 4.98 ಕೋಟಿ ನಿವ್ವಳ ಲಾಭವಾಗಿದೆ ಎಂದು ಪಟ್ಟಣದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ಹೊಳೆ ಹುಚ್ಚೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮುರುಗೇಶ ಕಡ್ಲಿಮಟ್ಟಿ ಸಂಘದ ಸಭಾಂಗಣದಲ್ಲಿ ಪತ್ರಿಕಾ ಸಭೆ ನಡೆಸಿದ ಅವರು ಸಂಘವು 16 ಶಾಖೆಗಳನ್ನು ಒಳಗೊಂಡಿದ್ದು ಬಾಗಲಕೋಟ, ಕೊಪ್ಪಳ, ರಾಯಚೂರು, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದರು
ಸಂಘಕ್ಕೆ 31-03-2025 ಕ್ಕೆ ಇದ್ದಂತೆ ಶೇರುದಾರರ ಸಂಖ್ಯೆ 8642, ಶೇರು ಬಂಡವಾಳ 10.52 ಕೋಟಿ,
ಸಂಘದ ಒಟ್ಟು ನಿಧಿ 11.31 ಲಕ್ಷ , ಒಟ್ಟು ಸಂಘದ ಠೇವು 557.10 ಕೋಟಿ, ಸಂಘದ ದುಡಿಯುವ ಬಂಡವಾಳ 585.96 ಕೋಟಿ, ಇದೆ.
ಸಂಘದ ಒಟ್ಟು ಸಾಲಗಾರರ ಸಂಖ್ಯೆ 3230 ಜನರಿಗೆ 413.75 ಕೋಟಿ ಸಾಲ ನೀಡಲಾಗಿದೆ. ಗುಂತಾವನೆಗಳು 141.94 ಕೋಟಿ ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಗುತ್ತಿದೆ ಒಟ್ಟಾರೆ ಸಂಘವು 2024-25 ನೇ ಸಾಲಿಗೆ ಒಟ್ಟು 4.98 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ 15 ವರ್ಷಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ
SSLC ಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣದವರಿಗೆ ₹1500
PUC, ITI, Diploma ದಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣನಾದವರಿಗೆ ₹2000
ಪದವಿಯಲ್ಲಿ ಶೇ 80 ಕ್ಕಿಂತ ಹೆಚ್ಚು, ಅಂಗಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ₹3000
IAS, KAS, IFS, IIT ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ₹ 7500
ಇದೆ ಆಗಷ್ಟ 2 ರಂದು ಶನಿವಾರ 35ನೇ ವಾರ್ಷಿಕ ಮಹಾಸಭೆಯು ಕಮತಗಿಯ ಶ್ರೀ ಪಾರ್ವತಿ ಪರಮೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ಸದಸ್ಯರಾದ ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ಹನಮಂತಪ್ಪ ಕಡಿವಾಲ, ಪ್ರಧಾನ ವ್ಯವಸ್ಧಾಪಕ ಶಿವಶಂಕರ ಮಾಶೆಟ್ಟಿ, ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಕಡ್ಲಿಮಟ್ಟಿ, ಸಲಹೆಗಾರ ಪಂಪಣ್ಣ ಪರಗಿ ಸುರೇಶ ಕಟ್ಟಿಮನಿ ಸೇರಿದಂತೆ ಇತರರು ಇದ್ದರು
ವರದಿ - ಶಂಕರ್ ವನಕಿ ಕಮತಗಿ (ಬಾಗಲಕೋಟೆ)

