ಕೀಟಜನ್ಯ ರೋಗಗಳು ಹಾಗೂ ಹದಿಹರೆಯದ ಕುರಿತು ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾಯ೯ಕ್ರಮ

 


ಕೀಟಜನ್ಯ ರೋಗಗಳು ಹಾಗೂ ಹದಿಹರೆಯದ ಕುರಿತು ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾಯ೯ಕ್ರಮ


ಕಮತಗಿ - ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಸೊಳ್ಳೆಗಳನ್ನು ಲಾವಾ೯ ಹಂತದಲ್ಲೇ ನಿಮೂ೯ಲನೆ ಮಾಡಬೇಕು ಸೋಂಕಿರು ಕ್ಯೊಲೆಕ್ಸ್ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಆನೆಕಾಲು ರೋಗಹರಡುತ್ತದೆ ಎಂದೂ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ ಎಫ್ ಮಾಯಾಚಾರಿ ಹೇಳಿದರು 

ಅವರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ,  ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ.  ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ, ಇವರ  ಸಯೋಗದಲ್ಲಿ, ಶಿರೂರಿನ ಸರಕಾರಿ ಮೆಟ್ರಿಕ್ ಪೂವ೯ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕೀಟಜನ್ಯ ರೋಗಗಳು ಹಾಗೂ ಹದಿಹರೆಯದ ಕುರಿತು ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾಯ೯ಕ್ರಮದಲ್ಲಿ ಆನೆಕಾಲು ರೋಗ ಹರಡುವ ಸೊಳ್ಳೆಗಳು ಚರಂಡಿ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ತನ್ನ ಸಂತಾನ ಬೆಳಸುತ್ತದೆ ಫೈಲೇರಿಯಾ ರೋಗವನ್ನು ಸಾಮಾನ್ಯವಾಗಿ ಆನೆಕಾಲು ರೋಗ ವೆಂದು ಕರೆಯುತ್ತಾರೆ ಕಾರಣ ರೋಗ ಪೀಡಿತ ವ್ಯಕ್ತಿಯ ಕಾಲು ಆನೆ ಕಾಲಿನಂತೆ ದಪ್ಪದಾಗಿರುತ್ತದೆ ರೋಗದ ಪ್ರಮುಖ ಲಕ್ಷಣಗಳೆಂದರೆ ಕೈ ಕಾಲು ವೃಷಣಕೋಶ ಮುಂತಾದ ಆವಯವಗಳಲ್ಲಿ ಊತ(ಬಾವು)ಕಂಡು ಬರುತ್ತದೆ ಈ ರೋಗವನ್ನು ಪತ್ತೆ ಹಚ್ಚವ ವಿಧಾನ ರಾತ್ರಿ ವೇಳೆಯಲ್ಲಿ ರಕ್ತ ಲೇಪನ ಸಂಗ್ರಹ ದಿಂದ ಏಕೆಂದರೆ ಮೈಕ್ರೋಫೈಲೇರಿಯಾ ಜಂತುಗಳು ರಾತ್ರಿ ವೇಳೆಯಲ್ಲಿ ಮಾತ್ರ ರಕ್ತ ಸಂಚಾರದಲ್ಲಿ ಕಾಣಿಸಿಕೊಳ್ಳುವುದರಿಂದ ರಾತ್ರಿ ವೇಳೆಯಲ್ಲಿ ಸಂಗ್ರಹಿಸಿ ಪರಿಕ್ಷೆ ಮಾಡಿದಾಗ ಗೊತ್ತಾಗುತ್ತದೆ.

 ಆದ್ದರಿಂದ ರಾತ್ರಿ ವೇಳೆ ರಕ್ತ ಲೇಪನ ಸಂಗ್ರಹಕ್ಕೆ ಸಹಕರಿಸಿ ನಿಮ್ಮ ಸುತ್ತ ಮುತ್ತ ನೀರು ನಿಲ್ಲದಂತೆ ಸ್ವಚ್ಚ ಪರಿಸರದಿಂದ ಕೀಟ ಜನ್ಯ ರೋಗಗಳಾದ ಡೆಂಗಿ ಮಲೇರಿಯಾ ಆನೆಕಾಲು ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು 

 ಹದಿಹರೆಯದ ಜೀವನದಲ್ಲಿ ಏನಾಗಬೇಕು ಎಂಬ ಗುರಿಯನ್ನು ನಿಧ೯ರಿಸಿಕೊಳ್ಳಿ ಹದಿಹರೆಯದ ಶಾಲಾ ಜೀವನದಲ್ಲಿ ಕಲಿಯುವ ಹೊಸ ವಿಚಾರ ಮತ್ತು ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಹೆಚ್ಚಿನ ಗಮನ ವಹಿಸಿ ವಿದ್ಯಾರ್ಥಿ ಜೀವನದಲ್ಲಿ ನೀವು ರೂಢಿಸಿಕೊಳ್ಳುವ ಮೌಲ್ಯ ನಿಮ್ಮ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಬಾಲ್ಯ ಮತ್ತು ವಯಸ್ಕತನದ ಮಧ್ಯೆ ಅಂದರೆ 10-19 ವಷ೯ದ ನಡುವಿನ ವಯೋಮಾನವೇ ಹದಿಹರೆಯ ಹದಿಹರೆಯವೆಂಬುದು ಒಂದು ಸಾಮಾನ್ಯ ಪ್ರಕ್ರಿಯೆ ನೀವಷ್ಟೇ ಅಲ್ಲ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಸಾಗುತ್ತಾರೆ ಎಂಬುದನ್ನು ನೆನಪಿಡಿ ದೇಹದಲ್ಲಿ ಬದಲಾವಣೆಗಳು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಸಯಮದಲ್ಲಾಗಬಹುದು ಆದರೆ ಪ್ರಕ್ರಿಯೆ ಒಂದೇ ಆಗಿರುತ್ತದೆ ಈ ಸಮಯದಲ್ಲಿ ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳು ಏಳಬಹುದು ಅದನ್ನು ನಿಮ್ಮ ಪೋಷಕರು ಶಿಕ್ಷಕರು ಅಥವಾ ನೀವು ಭರವಸೆ ಇಡುವ ಮತ್ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಂಡು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ ಎಂದು ಹೇಳಿದರು 

ನಂತರ ನಿಲಯದ ಮೇಲ್ವಿಚಾರಕರಾದ ಹೇಮಾ ಹೆಗಡ್ಡಿ ರವರು ಆರೋಗ್ಯವೆಂದರೆ ಶಾರೀರಿಕವಾಗಿ ಮಾನಸಿಕವಾಗಿ ದೃಢವಾಗಿರುವುದು ಎಂದಥ೯ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದಲು ಕ್ರಿಯಾತ್ಮಕವಾಗಿ ಚಿಂತನೆ ಮಾಡಲು ಆರೋಗ್ಯವು ಚೆನ್ನಾಗಿರುವುದು ಬಹಳ ಮುಖ್ಯ ಹಿಂಥ ಕಾಯ೯ಕ್ರಮಗಳಿಂದ ನಮ್ಮ ವಿಧ್ಯಾರ್ಥಿಗಳಿಗೆ ಅನಕೂಲವಾಯಿತು ಎಂದೂ ಮಾತನಾಡಿದರು.

 ಕಾಯ೯ಕ್ರಮದ ಕುರಿತು ರಂಗನಾಥ ಜಂಗನ್ನವರ ಮಾತನಾಡಿದರು ಕಾಯ೯ಕ್ರಮದಲ್ಲಿ ಆಶಾ ಕಾಯ೯ಕತೆ೯ಯರಾದ ಲಕ್ಷ್ಮೀ ಕೋಟೆಕಲ್ಲ, ಲಕ್ಷ್ಮಿ ಗೌಡರ, ಹಾಗೂ ನಿಲಯದ ಸಿಬ್ಬಂದಿ ವಿಧ್ಯಾರ್ಥಿಗಳು ಬಾಗವಹಿಸಿದ್ದರು ನಂತರ ರಾತ್ರಿ ರಕ್ತ ಲೇಪನ ಗಳನ್ನು ಸಂಗ್ರಹಿಸಿದರು. 


ವರದಿ - ✍️ ಶಂಕರ್ ವನಕಿ  ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು