ನಿವೃತ್ತ ಯೋಧನಿಗೆ ಭವ್ಯಸ್ವಾಗತ ಗೈದ ಕಮತಗಿ ಮಂದಿ*
ಭಾರತದ ಸೇನೆಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಜನ್ಮಭೂಮಿ ಕಮತಗಿ ಪಟ್ಟಣಕ್ಕೆ ಮರಳಿದ ಲಕ್ಷ್ಮಣ ಮುಚಖಂಡೆಪ್ಪ ಪೂಜಾರಿ ಅವರನ್ನು ಪಟ್ಟಣದಲ್ಲಿ ಅವರ ಸಂಭಂದಿಗಳು ನಾಗರಿಕರು ಅದ್ದೂರಿಯಾಗಿ ಬರಮಾಡಿಕೊಂಡರು
ಲಕ್ಷ್ಮಣ ಪೂಜಾರಿ ಅವರು 2002ರಿಂದ 2026 ರ ವರಗೆ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇರಿ ನಂತರ ಹವಾಲ್ದಾರಾಗಿ ಕಾರ್ಯನಿರ್ವಹಿಸಿದರು.
ಕಳೆದ ಅಪರೇಷನ್ ಸಿಂಧೂರದಲ್ಲೂ ಭಾಗಿಯಾಗಿದ್ದರು ಲಕ್ಷ್ಮಣ ಅವರದು ದೇಶ ಸೇವೆಗೆ ಮತ್ತು ರಕ್ಷಣೆಗೆ ಅಪಾರ ಕೊಡುಗೆ
ಪಟ್ಟಣದ ಹೊಳೆ ಹುಚ್ಚೇಶ್ವರ ಮಠದಿಂದ ತೆರೆದ ವಾಹಣದಲ್ಲಿ ಲಕ್ಷ್ಮಣ ಅವರನ್ನು ಶಾಲಾ ವಿದ್ಯಾರ್ಥಿಗಳು, ನಿವೃತ್ತ ಯೋಧರು, ನಾಗರಿಕರು ಜಯ ಘೋಷದೊಂದಿಗೆ ಬರಮಾಡಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು, ನಂತರ ವಾಲ್ಮೀಕಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದಾರಿಯುದ್ದಕ್ಕೂ ಜನರು ನಿವೃತ್ತ ಯೋಧರು ಶಾಲಾ ವಿದ್ಯಾರ್ಥಿಗಳು 200 ಮೀ ಉದ್ದದ ರಾಷ್ಟ್ರ ಧ್ವಜವನ್ನು ಮೆರವಣಿಗೆ ನಡೆಸಿದರು
ಸೇನೆಯಿಂದ ನಿವೃತ್ತಿ ಪಡೆದು ತವರೂರು ಕಮತಗಿ ಪಟ್ಟಣಕ್ಕೆ ಆಗಮಿಸಿದ ಯೋಧ ಲಕ್ಷ್ಮಣ ಪೂಜಾರಿ ಅವರನ್ನು ಅದ್ದೂರಿಯಿಂದ ಸ್ವಾಗತಿಸಲಾಯಿತು.
ನಿವೃತ್ತ ಯೋಧ ಲಕ್ಷ್ಮಣ ದಂಪತಿಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ನಡೆಯಿತು

