ಮಂತ್ರಾಲಯ - ಕಳೆದ ಒಂದು ತಿಂಗಳ ಅವಧಿಗಳ ದಿನಗಳಲ್ಲಿ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಠಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆಯ ಹುಂಡಿ ಎಣಿಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ 5 ಕೋಟಿ ರುಪಾಯಿಗಳಿಗೂ ಮೀರಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.
ಒಟ್ಟು 5,28,39,538, (ಐದು ಕೋಟಿ ಇಪ್ಪಂತೆಂಟು ಲಕ್ಷ ಮುವ್ವತ್ತೊಂಭತ್ತು ಸಾವಿರದ ಐದು ನೂರಾ ಮುವ್ವತ್ತೆಂಟು ) ರೂ. ಕಾಣಿಕೆ ರೂಪದಲ್ಲಿ ಭಕ್ತರು ಶ್ರೀ ಗುರುರಾಯರಿಗೆ ಸಮರ್ಪಿಸಿದ್ದಾರೆ.
ಒಟ್ಟು ಕಾಣಿಕೆಯಲ್ಲಿ 5,13,04,958 ( ಐದು ಕೋಟಿ ಹದಿಮೂರು ಲಕ್ಷ ನಾಲ್ಕು ಸಾವಿರದ ಒಂಬೖನೂರಾಐವತ್ತೆಂಟು) ರೂ. ನಗದು ನೋಟುಗಳು ಹಾಗೂ 15,34,580 ( ಹದಿನೖದು ಲಕ್ಷ ಮುವ್ವತ್ತ ನಾಲ್ಕು ಸಾವಿರದ ಐದುನೂರಾ ಎಂಭತ್ತು )ರೂ ನಾಣ್ಯಗಳು ಸಂಗ್ರಹ ಆಗಿದೆ. 43 ಗ್ರಾಂ ಚಿನ್ನ, 1ಕೆ. ಜಿ 837 ಗ್ರಾಂ ಬೆಳ್ಳಿ ಕಾಣಿಕೆ ಸಲ್ಲಿಕೆಯಾಗಿದೆ.
ಶ್ರೀ ಮಠದ ಕರ ಸೇವಕರು, ಮಠದ ಭಕ್ತರು, ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.