15 ದಿನಗಳು ಗತಿಸಿದರು ಸಾಮಾನ್ಯ ಸಭೆ ಕರೆಯದ ಪಟ್ಟಣ ಪಂಚಾಯತ ಅಧ್ಯಕ್ಷರು
ಉಪಾಧ್ಯಕ್ಷರಿಗೆ ಸಭೆ ಕರೆಯುವಂತೆ ಮನವಿ ಸಲ್ಲಿಸಿದ ಪಟ್ಟಣ ಪಂಚಾಯತ ಸದಸ್ಯರು
ಕಮತಗಿ - ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ರಾಜಕೀಯ ಮತ್ತೆ ಮುನ್ನೆಲೇಗೆ ಬಂದಿದೆ
ಕಳೆದ 15 ದಿನಗಳ ಹಿಂದೆ ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ರಮೇಶ್ ಎಸ್ ಜಮಖಂಡಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಲುವಾಗಿ 13 ಜನ ಪಟ್ಟಣ ಪಂಚಾಯತ ಸದಸ್ಯರು ಪ ಪಂ ಮುಖ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
15 ದಿನಗಳು ಕಳೆದರೂ ಅಧ್ಯಕ್ಷರು ಸಭೆಯನ್ನು ಕರೆಯದೆ ಇದ್ದುದರಿಂದ ಅಧ್ಯಕ್ಷರ ವಿರುದ್ಧ ಸ್ವಪಕ್ಷದ 8 ಜನ ಪಕ್ಷೇತರ ಒಬ್ಬ ಸದಸ್ಯ ಬಿಜೆಪಿಯ 3 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಲುವಾಗಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ನಿಂಬಲಗುಂದಿ ಅವರಿಗೆ ಮನವಿ ಸಲ್ಲಿಸಿದ್ದಾರೆ
ಕರ್ನಾಟಕ ಪುರಸಭೆ ಅಧಿನಿಯಮ 1964ರ (47 (3) ರ ಪ್ರಕಾರ ಅಧ್ಯಕ್ಷರು ವಿಶೇಷ ಸಾಮಾನ್ಯ ಸಭೆಯನ್ನು 15 ದಿನ ಗತಿಸಿದರು ಸಭೆ ಕರೆದಿಲ್ಲವಾದ್ದರಿಂದ ಉಪಾಧ್ಯಕ್ಷರು ಸಾಮಾನ್ಯ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಉಪಾಧ್ಯಕ್ಷರಿಗೆ ಕಮತಗಿ ಪಟ್ಟಣ ಪಂಚಾಯತ ಸದಸ್ಯರು ಅಧ್ಯಕ್ಷರ ವಿರುದ್ಧ ತಮ್ಮ ಆಡಳಿತ ವೈಕರಿ ಹಾಗೂ ಏಕಪಕ್ಷಿಯ ನಿರ್ಧಾರ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು, ಹಾಗೂ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡದೆ ಇರುವುದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಶೀಘ್ರದಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದಾರೆ
ಈ ಮಧ್ಯೆ ಪಟ್ಟಣದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ವಿದ್ಯುತ್ ದೀಪ ಮೊದಲಾದ ಸೌಕರ್ಯಗಳ ಕೊರತೆ ಎಂದು ಕಾಣುತ್ತಿದೆ ತಾವುಗಳು ರೆಸಾರ್ಟ್ ಗೆ ಹೋದರೆ ಪಟ್ಟಣದ ಅಬಿವೃದ್ದಿ ಹೇಗೆ ಸಾದ್ಯ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸದಸ್ಯ ದೇವಿಪ್ರಸಾದ ನಿಂಬಲಗುಂದಿ ನಾವು ಯಾವ ರೆಸಾರ್ಟೀಗೂ ಹೋಗಿಲ್ಲ ಪಟ್ಟಣದಲ್ಲೆ ಇದ್ದೇವೆ ನಮ್ಮ ವಾರ್ಡಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಬಸವರಾಜ ಕುಂಬಳಾವತಿ, ಸಂಗಪ್ಪ ಗಾಣಿಗೇರ, ಹುಚ್ಚೇಶ ಮದ್ಲಿ, ರತ್ನ ತಳಗೇರಿ, ಹುಚ್ಚವ್ವ ಹಗೆದಾಳ, ಲಕ್ಷ್ಮಣ್ ಮಾದರ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದಪ್ಪ ಕುರಿ, ಅವರು ಕಮತಗಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ನಿಂಬಲಗುಂದಿ ಮತ್ತು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ಶ್ರೀ ಎಫ್ಎನ್ ಹುಲ್ಲಿಕೇರಿ ಅವರಿಗೆ ಮನವಿ ಸಲ್ಲಿಸಿದ್ದಾರೆ
"15 ದಿನಗಳು ಗತಿಸಿದರು ಪಟ್ಟಣ ಪಂಚಾಯತ ಅಧ್ಯಕ್ಷರು ಸಭೆ ಕರೆಯದೆ ಇದ್ದುದರಿಂದ ಮುಂದುವರೆದ ಭಾಗವಾಗಿ ನಾವು ಉಪಾಧ್ಯಕ್ಷರಿಗೆ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದೇವೆ"
ಬಸವರಾಜ ಕುಂಬಳಾವತಿ ಪ. ಪಂ ಸದಸ್ಯ ಕಮತಗಿ
"ಸದಸ್ಯರು ನೀಡಿದ ಅರ್ಜಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಕಾನೂನಿನ ಚೌಕಟ್ಟಿನಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ"
ಶ್ರೀಮತಿ ನೇತ್ರಾವತಿ ನಿಂಬಲಗುಂದಿ ಪ.ಪಂ ಉಪಾಧ್ಯಕ್ಷೆ ಕಮತಗಿ