ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಪ್ರತಿಷ್ಠಿತ ವ್ಯವಹಾರ ಸಂಘವಾದ ಶ್ರೀ ಪಾರ್ವತಿ ಪರಮೇಶ್ವರ ಪತ್ತಿನ ಸಹಕಾರ ಸಂಘ ನಿ.ಕಮತಗಿ ಇದರ 2025 ರಿಂದ 2030 ರ ವರೆಗಿನ ಆಡಳಿತ ಮಂಡಳಿಯ ಚುನಾವಣೆ ಜರುಗಿತು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ/ ಹಿಂದುಳಿದ ವರ್ಗ "ಅ" ಮತ್ತು / ಪರಿಶಿಷ್ಟ ಜಾತಿ/ ಮಹಿಳಾ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲ ಹನ್ನೊಂದು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಿಂದುಳಿದ ವರ್ಗ ಬ ಹಾಗೂ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ
ಸಂಘದ ಅಧ್ಯಕ್ಷರಾಗಿ ಶಂಕರಲಿಂಗಪ್ಪ ಎಸ ಮಂಕಣಿ, ಉಪಾಧ್ಯಕ್ಷರಾಗಿ ಗುರುನಾಥ ಎಸ್ ಜಾಪಾಳ, ಅವೀರೋಧವಾಗಿ ಆಯ್ಕೆಯಾಗಿದ್ದಾರೆ ಸಹಕಾರಿ ಸಂಘದ ನಿರ್ದೇಶಕರಾಗಿ ಗುರುಸಿದ್ದಪ್ಪ ಶಿರೂರ, ನಾಗೇಶ ಹುಲ್ಲೂರ, ಸಂಗಮೇಶ ಕೊಳ್ಳಿ, ವೀರಣ್ಣ ಬಾಚಾಳ, ಯಲ್ಲಪ್ಪ ಬಡಕನ್ನವರ, ಸುರೇಶ ಹಳ್ಳದ, ಯಲ್ಲಪ್ಪ ವಡ್ಡರ, ಶ್ರೀಮತಿ ಸುವರ್ಣ ಗೌಡರ, ಶ್ರೀಮತಿ ಸುರೇಖಾ ಹಳ್ಳದ ಇವರೆಲ್ಲರು ಅವೀರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಶ್ರೀ ಬಿ ಎನ್ ಪೋಲೀಸಪಾಟೀಲ ಮತ್ತು ಸಂಘದ ಪ್ರದಾನ ವ್ಯವಸ್ಥಾಪಕ ರಾಜು ಜಾಪಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯ್ಕಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಎಲ್ಲ ನಿರ್ದೇಶಕರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೆ ಸಂಧರ್ಬದಲ್ಲಿ ಸಂಘದ ಸಿಬ್ಬಂದಿಗಳು ಹಾಜರಿದ್ದರು.
ವರದಿ - ಶಂಕರ್ ವನಕಿ ಕಮತಗಿ (ಬಾಗಲಕೋಟ)