ಕಮತಗಿ ಸ್ವಾಗತ ಕಮಾನು ಹಾಗೂ ಗ್ರಂಥಾಲಯಕ್ಕೆ ಭೂಮಿ ಪೂಜೆ

 




ಸ್ವಾಗತ ಕಮಾನು ಹಾಗೂ ಗ್ರಂಥಾಲಯಕ್ಕೆ ಭೂಮಿ ಪೂಜೆ 


ಕಮತಗಿ: ಪಟ್ಟಣದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನಗರೋತ್ಥಾನ ಹಂತ–4ರ ಯೋಜನೆಯಡಿ ಪಟ್ಟಣದ ಕ್ರಾಸ್‌ನಲ್ಲಿ ನಿರ್ಮಾಣಗೊಳ್ಳಲಿರುವ ಕಮತಗಿ ಪಟ್ಟಣಕ್ಕೆ ಸ್ವಾಗತ ಕಮಾನು ಹಾಗೂ ಪಿ.ಎಂ. ಶ್ರೀ ಯೋಜನೆಯಡಿ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲಾ ನಂ 1 ಆವರಣದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಳಾವತಿ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಿದರು. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಪ್ರಮುಖ ಪ್ರವೇಶ ದ್ವಾರದಲ್ಲಿ ನಿರ್ಮಾಣಗೊಳ್ಳಲಿರುವ ಸ್ವಾಗತ ಕಮಾನು ಕಮತಗಿ ಪಟ್ಟಣದ ಗುರುತಾಗಿ ರೂಪುಗೊಳ್ಳಲಿದೆ. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುವುದರ ಜೊತೆಗೆ, ಆಗಮಿಸುವ ನಾಗರಿಕರಿಗೆ ಆಕರ್ಷಕ ಸ್ವಾಗತ ಸಿಗಲಿದೆ ಎಂದು ಅವರು ಹೇಳಿದರು.




ಪಿ.ಎಂ. ಶ್ರೀ ಯೋಜನೆಯಡಿ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ನಂ 1 ರಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಗ್ರಂಥಾಲಯ ಕಟ್ಟಡವು ವಿದ್ಯಾರ್ಥಿನಿಯರಿಗೆ ಉತ್ತಮ ಅಧ್ಯಯನ ವಾತಾವರಣ ಒದಗಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಗಟ್ಟಿಗೊಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ನಿಂಬಲಗುಂದಿ, ಪಪಂ ಸದಸ್ಯರಾದ ದೇವಿಪ್ರಸಾದ ನಿಂಬಲಗೂಂದಿ, ಚಂದು ಕುರಿ, ಜಿಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಬಾಯಕ್ಕ ಮೇಟಿ, ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ಎಸ್.ಎಸ್. ಮಂಕಣಿ, ನಬಿ ತಹಶೀಲ್ದಾರ, ಯಲ್ಲಪ್ಪ ವಡ್ಡರ, ನಾಗೇಶ ಮುರಾಳ, ತಿಮ್ಮಣ್ಣ ಹಗೇದಾಳ, ಲಕ್ಷ್ಮಣ ದ್ಯಾಮಣ್ಣವರ, ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಫಕ್ರುದ್ದೀನ್. ಹುಲ್ಲಿಕೇರಿ, ಶಾಲೆಯ ಮುಖ್ಯ ಶಿಕ್ಷಕರಾದ ಗುರುನಾಥ ಗೌಡರ ಶಿಕ್ಷಕರಿಗೆ ಶಂಕರ್ ಬಿಜಾಪೂರ ಹಾಗೂ ಶಿಕ್ಷಕ ವೃಂದ, ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ವರದಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು