ಹಂಪಿ ಹೇಮಕೂಟದಿಂದ 8 ನೇ ವರ್ಷದ ಪಾದಯಾತ್ರೆ

 



ಹಂಪಿ ಹೇಮಕೂಟದಿಂದ 8 ನೇ ವರ್ಷದ ಪಾದಯಾತ್ರೆ

ಹೊಸಪೇಟೆ -  ಜನವರಿ 3ರಂದು ನಡೆಯಲಿರುವ ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಬಾದಾಮಿಯ ಶ್ರೀ ಬನಶಂಕರಿ ದೇವಿ ಜಾತ್ರೆಯ ನಿಮಿತ್ತ ಪಿತಾಮರ ಸೀರೆ ಹಾಗೂ ಬಾಗಿನ ಸಮರ್ಪನ ಅಂಗವಾಗಿ 

ಪಾದಯಾತ್ರೆ ಸೇವಾ ಸಮಿತಿ ಹಂಪೆ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ದಯಾನಂದಪುರಿ ಮಹಾಸ್ವಾಮಿಗಳ ಆದೇಶದ ಮೇರೆಗೆ ಪಾದಯಾತ್ರೆ ಸೇವಾ ಸಮಿತಿಯ ನಿರ್ಣಯ ದಂತೆ ಶ್ರೀ ಕ್ಷೇತ್ರ ಹಂಪಿ ಹೇಮಕೂಟದಿಂದ ಪಾವನಕ್ಷೇತ್ರ ಬಾದಾಮಿಯ ಶ್ರೀ ಬನಶಂಕರಿ ಅಮ್ಮನವರಿಗೆ ಪ್ರತಿ ವರ್ಷದಂತೆ 8 ನೇ ವರ್ಷದ ಪಲ್ಲಕ್ಕಿಯೊಂದಿಗೆ ಪೀತಾಂಬರ ಸಮರ್ಪಣಾ ಪಾದಯಾತ್ರೆಯನ್ನು 2 ದಿನ ವಾಹನ ಹಾಗೂ 2 ದಿನ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಹಂಪೆಯ ಶ್ರೀ ಗಾಯತ್ರಿ ಪೀಠದಿಂದ ಡಿಸೆಂಬರ್‌ 30 ರ ಮಂಗಳವಾರ ಬೆಳಗ್ಗೆ. 6-00 ಗಂಟೆಗೆ ಪೀತಾಂಬರ ಸೀರೆ ಹೊತ್ತ ಪಲ್ಲಕ್ಕಿಯೊಂದಿಗೆ ಮೊದಲನೇಯ ದಿನ ವಾಹನದ ಮುಖಾಂತರ ಪಾದಯಾತ್ರೆ ಪ್ರಾರಂಭಿಸಿ

ಹೊಸಪೇಟೆ, ನಂ 10 

 ಮುದ್ದಾಪುರ, 

ಕಂಪ್ಲಿ, 

 ಗಂಗಾವತಿಯಲ್ಲಿ ಮೂಲ ಗುರುಗಳಾದ ಶ್ರೀ ಮುದ್ದುಸಂಗ ಸ್ವಾಮಿ ಗವಿಮಠಕ್ಕೆ ಪೀತಾಂಬರ ಸೀರೆಯನ್ನು ಹೊತ್ತ ಪಲ್ಲಕ್ಕಿಯೊಂದಿಗೆ ಹೋಗಿ ಶ್ರೀಗಳವರಿಂದ ಪೂಜ ಕಾರ್ಯ ಜರಗುವುದು ನಂತರ ಹೆರೂರು, ಮಾರ್ಗವಾಗಿ ರಾತ್ರಿ ಕನಕಗಿರಿಯಲ್ಲಿ ವಾಸ್ತವ್ಯ

 ಡಿಸೆಂಬರ್‌ 31 ಕನಕಾಪೂರ, 

ಹುಲಿಹೈದರ, 

ಮೇಣೆದಾಳ, 

ತಾವರಗೇರಿ, 

ಮುದೇನೂರು, 

ದೋಟಿಹಾಳ, 

ಕ್ಯಾದಗುಪ್ಪ ಮಾರ್ಗವಾಗಿ ಬಂದು ರಾತ್ರಿ ಇಲಕಲ್ಲಿನಲ್ಲಿ ವಾಸ್ತವ್ಯ 

ಜನಬರಿ 1 ರಂದು ಇಲಕಲ್ಲಿನಿಂದ ಪಾದಯಾತ್ರೆ ಮೂಲಕ ರಾತ್ರಿ ಗೂಡೂರು ವಾಸ್ತವ್ಯ ಜನವರಿ 2 ಕ್ಕೆ ಸಂಜೆ ಶ್ರೀ ಕ್ಷೇತ್ರ ಬನಶಂಕರಿ ತಲುಪಿ ಭವ್ಯ ಮೆರವಣಿಗೆಯೊಂದಿಗೆ ತಾಯಿ ಶ್ರೀ ಬನಶಂಕರಿ ದೇವಿಗೆ ಬಾಗಿಣ ಹಾಗು ಪೀತಾಂಬರ ಸೀರೆ ಸಮರ್ಪರ್ಪಿಸಲಾಗುತ್ತದೆ ಈ ಪಾದಯಾತ್ರೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿ ಗೊಳಿಸಬೇಕೆಂದು ಪಾದಯಾತ್ರಾ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸಂಚಾಲಕ ನಾಗರಾಜ ಪರಗಿ ಕೋರಿದ್ದಾರೆ


ವರದಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು