ಕಮತಗಿ ಪಟ್ಟಣದಲ್ಲಿ ವಿವಿಧಡೆ ಧ್ಜಜಾರೋಹಣ
ಕಮತಗಿ - ಕಮತಗಿ ಪಟ್ಟಣದಲ್ಲಿ ವಿವಿದೆಡೆ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಅಧ್ಯಕ್ಷ ಬಸವರರಾಜ ಕುಂಬಳಾವತಿ, ಧ್ಜಜಾರೋಹಣ ನೆರವೇರಿಸಿ ರಾಜ್ಯ ಪ್ರಶಸ್ತಿ ವಿಜೇತ ಅಂಗವಿಕಲ ನೇಕಾರ ಲಕ್ಷ್ಮಣ ಕಕ್ಕಣ್ಣವರ ಅವರನ್ನು ಸನ್ಮಾನಿಸಿದರು
ಶ್ರೀ ಹೊಳೆಹುಚ್ಚೇಶ್ವರ ಕೋ ಅಪ್ ಕ್ರೆಡಿಟ್ ಸೋಸಾಯಿಟಿಯ ಬಝಾರ ಶಾಖೆ ಮಹಿಳಾ ಶಾಖೆ, ಪ್ರಧಾನ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಮುರುಗೇಶ ಕಡ್ಲಿಮಟ್ಟಿ, ಶ್ರಿ ಬನಶಂಕರಿ ಪ್ರಾಥಮಿಕ ಶಾಲೆಯಲ್ಲಿ ಬಸವರಾಜ ಕುಂಬಳಾವತಿ, ಶ್ರೀ ಹುಚ್ಚೇಶ್ವರ ವಿದ್ಯಾವರ್ದಕ ಸಂಘದಲ್ಲಿ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು,
ಪಟ್ಟಣದ ಹೃದಯಭಾಗದ ಗಾಂಧಿಚೌಕಿನಲ್ಲಿ ನಿವೃತ್ತ ಗೃಹರಕ್ಷಕದಳದ ಅಧಿಕಾರಿ ಎಸ್, ಸಿ. ಬಂಡಿ, ಹಿರೇಮಠದ ಆವರಣದಲ್ಲಿ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷ ಹಾಲಿ ಸದಸ್ಯ ಸಂಗಪ್ಪ ಗಾಣಿಗೇರ, ವೀರಯೋಧ ನಾಗೇಶ ಜಾಪಾಳ ಸ್ಮಾರಕದ ಎದುರು ಪಿಎಸ್ಆಯ್ ಜ್ಯೋತಿ ವಾಲಿಕಾರ, ಪಿ. ಕೆ. ಪಿ.ಎಸ್ ನಲ್ಲಿ ಅಧ್ಯಕ್ಷ ಸಿದ್ದು ಹೊಸಮನಿ, ಜನತಾ ಕೋ ಅಪರೇಟಿವ್ ಸೋಸಾಯಿಟಿಯಲ್ಲಿ ಅಧ್ಯಕ್ಷ ವಿನೋದ ಹಾವೇರಿ, ಅನ್ನಪೂರ್ಣೇಶ್ವರಿ ಪತ್ತಿನ ಸಂಘದಲ್ಲಿ ಅಧ್ಯಕ್ಷ ವೀರಭದ್ರಪ್ಪ ಆರಿ. ಕೆಎಸ್ಆರ್ ಟಿ ಸಿ ಬಸ್ ನಿಲ್ದಾನದಲ್ಲಿ ಪ. ಪಂ ಸದಸ್ಯ ಚಂದಪ್ಪ ಕುರಿ, ಧ್ವಜಾರೋಹಣ ನೆರವೇರಿಸಿದರು.
ಪಟ್ಟಣದ ವಿವಿಧ ಶಾಲಾ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಮುಖ್ಯಸ್ಥರು. ವಿವಿಧ ಸಹಕಾರ ಸಂಘಗಳು, ನೇಕಾರ ಸಂಘಗಳು. ಖಾಸಗಿ ಶಿಕ್ಷಣ ಸಂಸ್ಥೆಗಳು,ಹೀಗೆ ಹತ್ತು ಹಲವಾರು ಕಡೆಗಳಲ್ಲಿ ಸಂಬ್ರಮದಿಂದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಡಗರ ಸಂಬ್ರಮದಿಂದ ಜರುಗಿತು.
ವರದಿ ಶಂಕರ್ ವನಕಿ ಕಮತಗಿ