ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘ ನಿ ಸೂಳೇಭಾವಿಯ ಕೇಂದ್ರ ಕಛೇರಿಯಲ್ಲಿ
ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ,ಆಯ್ಕೆಯಾದ ಬಸವರಾಜ ಪುಂಡಲಿಕಪ್ಪ ಕುಂಬಳಾವತಿ ಹಾಗೂ
ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರಿ ಸಂಘ ನಿ, ಕಮತಗಿ ಇದರ ಮುಂದಿನ ಐದು ವರ್ಷದ ಅವಧಿಗೆ 2 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ, ವೀರಭದ್ರಪ್ಪ ಆರಿ ಅವರನ್ನು
ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ರವೀಂದ್ರ ಪಿ ಕಲಬುರ್ಗಿ ಅವರ ನೇತೃತ್ವದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೋಪಾಲಪ್ಪ ವನಕಿ, ಗದಗಯ್ಯ ನಂಜಯ್ಯನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಸೂಳೇಭಾವಿ, ನಿರ್ದೇಶಕ ಶ್ರೀಕಾಂತ ಧೂಪದ , ಸಂಗಮೇಶ ಬಂಡೆಪ್ಪನವರ, ಮೈನಪ್ಪ ಸಿಂಗಾಡಿ ಗಾಯತ್ರಿ ಪತ್ತಿನ ಸಹಕಾರ ಸಂಘದ ಪ್ರದಾನ ವ್ಯವಸ್ಥಾಪಕ ಹೇಮಂತ ದುತ್ತರಗಿ ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.