50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ

 


50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ 


50ನೇ ವರ್ಷದ ಮಹಾತ್ಮ ಗಾಂಧಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಘ ಕಮತಗಿ ಇವರ ವತಿಯಿಂದ 50ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು ಈ ಕಾರ್ಯಕ್ರಮದಲ್ಲಿ ಷಡಕ್ಷರ ಬ್ರಹ್ಮ 18 ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಮತಗಿ ಇವರು ವಹಿಸಿದ್ದರು. ಸಾನಿಧ್ಯವನ್ನು ಮಾತೋಶ್ರೀ ಬಸವಣ್ಣಮ್ಮ ತಾಯಿ ಬಸರ್ ಕೋಡ್ ರೇಣುಕಾ ಎಲ್ಲಮ್ಮ ದೇವಸ್ಥಾನ ಕಮತಿ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ಸಂಗಪ್ಪ ಗಾಣಿಗೇರ್ ಮಾಜಿ ಅಧ್ಯಕ್ಷರು ಪ್ರಸ್ತುತ ಸದಸ್ಯರು ಪಟ್ಟಣ ಪಂಚಾಯತ್ ಕಮತಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ನಾಗೇಶ್ ಜಯ ಶ್ರೀ ಹುಚ್ಚೇಶ್ ಮಲ್ಲಿ ಪಟ್ಟಣ ಪಂಚಾಯತಿ ಸದಸ್ಯರು ಕಮತಿ ಮತ್ತು ಶ್ರೀ ಹುಚ್ಚೇಶ್ ಜಯ ಅಧ್ಯಕ್ಷರು ಬೀದಿಬದಿ ವ್ಯಾಪಾರಸ್ಥರ ಸಂಘ ಇವರು ವಹಿಸಿದ್ದರು. ಸಾಯಂಕಾಲ 7:00ಗೆ ಪುಷ್ಪಾ ತಾಯಿ ಫೌಂಡೇಶನ್ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಗಣ ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ



ಗಣ ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಳಗ್ಗೆ 8 ಗಂಟೆಗೆ ಘನ ಹೋಮದ ಕಾರ್ಯಕ್ರಮವನ್ನು ಗಣೇಶ ಶಾಸ್ತ್ರಿಗಳು ಹಿರೇಮಠ ಕಮತಗಿ ಇವರು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಮುರುಗೇಶ ಆಯ ಕಡ್ಲಿಮಟ್ಟಿ ಮತ್ತು ಬಾಗಲಕೋಟೆಯ ಉದ್ದಿಮೆದಾರರು ಶ್ರೀ ಸಂತೋಷ ಹೊಕ್ರಾಣಿ ಹಾಗೂ ಮಹಾತ್ಮ ಗಾಂಧಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಘದ ಎಲ್ಲಾ ಕಾರ್ಯಕರ್ತರು ಮತ್ತು ಊರಿನ ಎಲ್ಲಾ ಸಾರ್ವಜನಿಕರು ಪಾಲ್ಗೊಂಡಿದ್ದರು. ಮಧ್ಯಾಹ್ನ ಶ್ರೀ ಗಜಾನನ ಮೂರ್ತಿಯ ಪ್ರಸಾದವನ್ನು ಸ್ವೀಕರಿಸಿ ಶ್ರೀ ವಿಘ್ನೇಶ್ವರನ ಕೃಪೆಗೆ ಪಾತ್ರರಾದರು.


ವರದಿ - ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು