ಪತಿ-ಪತ್ನಿ ಜಗಳ, ತಲೆ ಬೋಳಿಸಿದ ಗಂಡ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದ
ಶ್ರೀದೇವಿ ದೇವರವರ(22) ಎಂಬ ಮಹಿಳೆಯ ಅರ್ಧ ತಲೆ ಬೋಳಿಸಿ ದುಷ್ಕೃತ್ಯ, ಮೆರೆದ ಪತಿ ಬಸಪ್ಪ
ಶ್ರೀದೇವಿ ಪತಿ ಬಸಪ್ಪ ಹಾಗೂ ವನ ಸ್ನೇಹಿತ ಸದಾಶಿವ ನ್ಯಾಮಗೌಡ ಅವರಿಂದ ಕೃತ್ಯ ನಡೆದಿದೆ.
ಕಳೆದ 6 ವರ್ಷದ ಹಿಂದೆ ಶ್ರೀದೇವಿಯನ್ನು
ನೌಕರಿ ಇದೆ ಎಂದು ಸುಳ್ಳು ಹೇಳಿ ಮದುವೆ ಆಗಿದ್ದ ಬಸಪ್ಪ ದೇವರವರ.
ಸುಳ್ಳು ಹೇಳಿ ಮದುವೆ ಆಗಿದ್ದ ಅಳಿಯನಿಗೆ ತಲೆ ಬೊಳಿಸ್ತಿನಿ ಅಂದ್ದಿದ್ದ ಶ್ರೀದೇವಿ ತಾಯಿ.
ಇದ್ರಿಂದ ಬಸಪ್ಪ ಹಾಗೂ ಶ್ರೀದೇವಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜಗಳದ ಹಿನ್ನೆಲೆ ತವರು ಮನೆಯಲ್ಲಿದ್ದ ಪತ್ನಿ.
ನಂತರ ತವರು ಮನೆಯಲ್ಲಿ ಸಖಿ ತಂಡದ ಕೌನ್ಸಿಲಿಂಗ್.
ಕೌನ್ಸಿಲಿಂಗ ಬಳಿಕ ಎರಡು ತಿಂಗಳ ಹಿಂದೆ ಗಂಡನ ಮನೆಗೆ ಹೋಗಿದ್ದ ಶ್ರೀದೇವಿ.
ಮತ್ತೆ ಕುಡಿದು ಬಂದು ಪತ್ನಿ ಜೊತೆ ನಿರಂತರ ಜಗಳ ಮಾಡ್ತಿದ್ದ ಗಂಡ ಬಸಪ್ಪ.
ಮೊನ್ನೆ ರಾತ್ರಿ ಗಲಾಟೆಯಾಗಿತ್ತು.
ಗಲಾಟೆ ಬಳಿಕ ರಾತ್ರಿ ಅರ್ಧ ತಲೆ ಬೋಳಿಸಿ ದುಷ್ಕೃತ್ಯ ಮೆರೆದ ಪತಿ ವಿರುದ್ದ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಸದ್ಯ ಪತ್ನಿ ಶ್ರೀದೇವಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.