1 ಟಿಎಂಸಿ ಅಂದ್ರೆ ಎಷ್ಟು ನೀರು? ಅದನ್ನು ಹೇಗೆ ಅಳೆಯಲಾಗುತ್ತದೆ

ಟಿಎಂಸಿ, ಯಾವುದೇ ಜಲಾಶಯ ಅಥವಾ ಡ್ಯಾಂನಲ್ಲಿ ಎಷ್ಟು ನೀರಿದೆ ಎಂದು ಕೇಳಿದ್ರೆ ಹೇಳೋದೇ ಟಿಎಂಸಿಗಳಲ್ಲಿ. ಹಾಗಿದ್ರೆ ಟಿಎಂಸಿ ಅಂದ್ರೇನು? 



1 ಟಿಎಂಸಿ ಅಂದ್ರೆ ಎಷ್ಟು ನೀರು? 

ಈ ಕುತೂಹಲ ನಿಮಗೂ ಇದ್ದಿರಬಹುದು. ಈ ಕುರಿತು ಇಲ್ಲಿದೆ ವಿವರ.

TMC ಅಂದರೆ One Thousand Million Cubic Feet ಎಂದರ್ಥ. ಅರ್ಥಾತ್, ಒಂದು ಸಾವಿರ ಅಡಿ ಉದ್ದ, ಒಂದು ಸಾವಿರ ಅಡಿ ಅಗಲ, ಒಂದು ಸಾವಿರ ಅಡಿ ಎತ್ತರದಲ್ಲಿ ಎಷ್ಟು ನೀರು ನಿಲ್ಲುತ್ತದೆಯೋ ಅಷ್ಟು ನೀರು!




ಇನ್ನೂ ಸುಲಭವಾಗಿ ಹೇಳಬೇಕು ಅಂದರೆ ಬರೋಬ್ಬರಿ 2300 ಎಕರೆ ಜಾಗದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿಎಂಸಿಗೆ ಸಮ. TMC ಯ ಪೂರ್ಣ ರೂಪ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ. ಇದನ್ನು T M C ಅಥವಾ Tmcft ಅಥವಾ Tmcft ಎಂದೂ ಸೂಚಿಸಲಾಗುತ್ತದೆ. ಇದು ನೀರಿನ ಪ್ರಮಾಣವನ್ನು ಅಳೆಯಲು ಬಳಸುವ ಒಂದು Decathlon. ಅಂದಹಾಗೆ ಟಿಎಂಸಿಯನ್ನು ಭಾರತದಲ್ಲಿ ಮಾತ್ರ ಜಲಾಶಯಗಳನ್ನು ಅಳೆಯಲು ಹೆಚ್ಚಾಗಿ ಬಳಸಲಾಗುತ್ತದೆ. 




1 ಟಿಎಂಸಿ ಎಂದರೆ ಅಂದಾಜು 2831 ಕೋಟಿ ಲೀಟರ್ ನೀರು ಅಥವಾ ಘನ ಅಡಿ.

ಸಾಮಾನ್ಯವಾಗಿ ದೊಡ್ಡ ಜಲಾಶಯಗಳ ಸಾಮರ್ಥ್ಯವನ್ನು ಅಳೆಯಲು ಟಿಎಂಸಿ ಎಂಬ ಪ್ರಮಾಣವನ್ನು ಬಳಸಲಾಗುತ್ತದೆ.          



ಉದಾಹರಣೆಗೆ  

ಭಾರತದ ಅತಿದೊಡ್ಡ ಜಲಾಶಯವಾದ ಖಾಂಡ್ವಾ ಜಿಲ್ಲೆಯ ಇಂದಿರಾಸಾಗರದ ಸಂಗ್ರಹ ಸಾಮರ್ಥ್ಯವು ಸುಮಾರು 346 ಟಿಎಂಸಿ ಆಗಿದೆ.                        ಟ್ಟಾರೆ ಲೀಟರ್, ಮಿಲಿ ಲೀಟರ್‌ಗಳಲ್ಲಿ ಅಳೆಯುವ ದ್ರವ ಪದಾರ್ಥವಾದ ನೀರನ್ನು ಅಳೆಯಲು ಬಳಕೆಯಾಗುವ ಟಿಎಂಸಿ ಹಿಂದಿನ ಅಳತೆ ನಿಜಕ್ಕೂ ಕುತೂಹಲಕರವಾಗಿದೆ.


ಖಡಕ್ ಕನ್ನಡ Digital ನ್ಯೂಸ್ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!