ಅಮೀನಗಡ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷೆ - ಉಪಾಧ್ಯಕ್ಷೆ ಆಯ್ಕೆ


ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ  ಪಟ್ಟಣ ಪಂಚಾಯತಿಗೆ  ಶ್ರೀಮತಿ ಬೇಬಿ ರಮೇಶ ಚವ್ಹಾಣ ನೂತನ ಅಧ್ಯಕ್ಷೆಯಾಗಿ ಶ್ರೀಮತಿ 
ಉಮಾಶ್ರೀ ಶ್ರೀನಾಥ ಹಣಗಿ  ಉಪಾಧ್ಯಕ್ಷೆಯಾಗಿ  ಬಿಜೆಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಆಯ್ಕೆ ಯಾಗಿದ್ದಾರೆ 

ಶುಕ್ರವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ರಮೇಶ ಮುರಾಳ 8 ಮತ ಪಡೆದುಕೊಂಡರು. ಬೇಬಿ ಚವ್ಹಾಣ 10 ಮತಗಳನ್ನು ಪಡೆದುಕೊಂಡು ಅಧ್ಯಕ್ಷೆಯಾಗಿ ಆಯ್ಕೆಯಾದರು, 


ಉಪಾಧ್ಯಕ್ಷ ಸ್ಥಾನಕ್ಕೆ ಫಾತಿಮಾ ದಾವಲಸಾಬ ಅತ್ತಾರ 8 ಮತ ಪಡೆದರೆ ಉಮಾಶ್ರೀ ಹಣಗಿ 10 ಮತಗಳನ್ನು ಪಡೆದುಕೊಂಡು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.


ತಹಶೀಲ್ದಾರ ನಿಂಗಪ್ಪ ಬಿರಾದಾರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಮುಖ್ಯಾಧಿಕಾರಿ ಸುರೇಶ ಪಾಟೀಲ ಇದ್ದರು.


ಲೋಕಸಭಾ ಸದಸ್ಯ ಪಿ. ಸಿ. ಗದ್ದಿಗೌಡರ, ಶಾಸಕ ಎಚ್. ವೈ. ಮೇಟಿ, ಸದಸ್ಯರಾದ ವಿ. ಎಸ್. ಕನ್ನೂರ, ಸಂತೋಷ ಐಹೊಳ್ಳಿ, ಬಾಬು ಛಬ್ಬಿ, ಸಂತೋಷ ಕಂಗಳ, ಗಣೇಶ ಚಿತ್ರಗಾರ, ರಾಘವೇಂದ್ರ ಮುಳ್ಳೂರ, ತುಕಾರಾಮ ಲಮಾಣಿ, ಸಂಜಯ ಐಹೊಳ್ಳಿ,ಸಂತೋಷ ಕಂಗಳ, ಸುಜಾತಾ ತತ್ರಾಣಿ, ವಿದ್ಯಾ ರಾಮವಾಡಗಿ ಅಮೀನಗಡ ಪಟ್ಟಣ ಪಂಚಾಯತ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು 


🖋️ ಶಂಕರ್ ವನಕಿ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!