ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಉಭಯ ನಾಯಕರುಗಳ ಪ್ರತಿಕ್ರಿಯೆ

ಇದೊಂದು ಶೂನ್ಯ ಬಜೆಟ್
ಎಚ್ ವೈ ಮೇಟಿ 
ಜನಪ್ರಿಯ ಶಾಸಕರು ಬಾಗಲಕೋಟೆ 
ಕೇಂದ್ರ ಸರ್ಕಾರದ‌ ಮೇಲೆ‌ ಜನರು ಇಟ್ಟಿರುವ ನಿರೀಕ್ಷೆ ಹುಸಿಗೊಂಡಿದೆ. ಕೃಷಿ, ಶಿಕ್ಷಣ ಕ್ಷೆತ್ರ, ಜವಳಿ. ಉದ್ಯೋಗ ಸೃಷ್ಟಿಗೆ ಬಜೆಟ್ ಶೂನ್ಯ ಕೊಡುಗೆ ನೀಡಿದೆ. 


ಅಭಿವೃದ್ಧಿ ಪರ ಬಜೆಟ್
P H ಪೂಜಾರ MLC ಬಾಗಲಕೋಟೆ 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ವಿಕಸಿತ ಭಾರತದ ದಿಕ್ಸೂಚಿಯಾಗಿದೆ ಎಂದು ಹೇಳಿದರು 


ಭವ್ಯ ಭಾರತದ ದಿಕ್ಸೂಚಿ ಬಜೆಟ್ 
V C ಚರಂತಿಮಠ ಮಾಜಿ ಶಾಸಕರು  ಬಾಗಲಕೋಟೆ

ಭವ್ಯ ಭಾರತದ ಕನಸನ್ನು ನನಸಾಗಿಸುವಲ್ಲಿ ಈ ಬಜೆಟ್ ಅಡಿಪಾಯವಾಗಲಿದ್ದು, ವಿಕಸಿತ ಭಾರತದ ದಿಕ್ಸೂಚಿಯಾಗಿದೆ ಎಂದು ಹೇಳಿದರು 


ಜನ ಮೆಚ್ಚಿದ ಬಜೆಟ್ 
ಸಂಗಪ್ಪ ಗಾಣಿಗೇರ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತ ಕಮತಗಿ 

ಸಾಮಾನ್ಯ ಜನರಿಗೆ ಕೈಗೆಟುಕುವ ಬಜೆಟ್ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಹೇಳಿದರು 


ಆಂಧ್ರಪ್ರದೇಶದ ಮತ್ತು ಬಿಹಾರದ ಬಜೆಟ್  
ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಮುಖಂಡರು 

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಹಳಷ್ಟು ನಿರೀಕ್ಷೆಗಳಿದ್ದವು. ಅದರಲ್ಲೂ ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಅನುದಾನ ಕೊಡುತ್ತಾರೆ ಎಂಬುವ  ನಿರೀಕ್ಷೆ ಹುಸಿಯಾಗಿದೆ.  ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಮಾತ್ರ ಹೆಚ್ಚಿನ ಅನುದಾನ ಘೋಷಣೆ ಆಗಿದೆ ಎಂದು ಹೇಳಿದರು


ಕರ್ನಾಟಕಕ್ಕೆ ಮತ್ತೊಮ್ಮೆ ಚೆಂಬು 
ಮಹಾಂತೇಶ ಅಂಗಡಿ 
ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತ ಕಮತಗಿ 

ಇದು ಖುರ್ಚಿ ಉಳಿಸಿಕೊಳ್ಳಲು ಮಾಡಿದ ಬಜೆಟ್. ಎಲ್ಲಾ ಹಣವನ್ನು ಬಿಹಾರ ಮತ್ತು ಆಂದ್ರಗಳಿಗೆ ನೀಡಿ ಕರ್ನಾಟಕಕ್ಕೆ ಮತ್ತೊಮ್ಮೆ ಚಂಬು ನೀಡಿದ್ದಾರೆ... ಬಡವರು ರೈತರು ನೇಕಾರರು ಮತ್ತು ಮಧ್ಯಮ ವರ್ಗದ ಜನರು ಹಿಡಿಶಾಪ ಹಾಕುತ್ತಿರುವ ಬಜಟ್ ಇದಾಗಿದೆ


ಜವಳಿ ಉದ್ಯಮಕ್ಕೆ ಯೋಜನೆ  ಘೋಷಿಸಿಲ್ಲ 
ಬಸವರಾಜ ಕುಂಬಳಾವತಿ 
ಪಟ್ಟಣ ಪಂಚಾಯತ ಸದಸ್ಯರು ಕಮತಗಿ

ರಾಜ್ಯದಿಂದ 19 ಜನ ಬಿಜೆಪಿ ಸಂಸದರು 4 ಜನ ಮಂತ್ರಿಗಳು ಇದ್ದರು  ರಾಜ್ಯಕ್ಕೆ ನಿರಾಶಾದಾಯಕ ಬಜೆಟ್ ಹಾಗೂ ಜವಳಿ ಉದ್ಯಮಕ್ಕೆ ಯಾವುದೆ ಅನುದಾನ ಇಲ್ಲ  ಹಾಗೂ ಯೋಜನೆಗಳು ಘೋಷಣೆಯಾಗಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!