ಸಾರ್ವತ್ರಿಕ ಗಣತಿ ಕಾರ್ಯ ಆರಂಭ
ಕಮತಗಿ - ಭಾರತ ಜನಗಣತಿ 2027 ರ ಪ್ರಥಮ ಹಂತ - ಕರ್ನಾಟಕ ರಾಜ್ಯದಲ್ಲಿ ಜನಗಣತಿ 2027 ರ ಪ್ರಥಮ ಹಂತವಾದ ಮನೆಪಟ್ಟಿ ಮತ್ತು ಗೃಹ ಜನಗಣತಿ (HLO) 16.04.2026 ರಿಂದ 15.05.2026 ರವರೆಗೆ 30 ದಿನಗಳ ಅವಧಿಯಲ್ಲಿ ನಡೆಯಲಿದೆ. ''ಸ್ವಯಂ ಗಣತಿ ಸೌಲಭ್ಯವು ದಿನಾಂಕ: 01-04-2026 ರಿಂದ 15-04-2026 ರವರೆಗೆ ಲಭ್ಯವಿರುತ್ತದೆ. ಮನೆಗಳ ಸ್ಥಿತಿ, ಸೌಲಭ್ಯಗಳು ಹಾಗೂ ಆಸ್ತಿಗಳ ಕುರಿತ ಮಾಹಿತಿಯನ್ನು ಈ ಹಂತದಲ್ಲಿ ಸಂಗ್ರಹಿಸಲಾಗುತ್ತದೆ.
ಜನಸಾಮಾನ್ಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮಾನ್ಯ ಭಾರತೀಯ ರಿಜಿಸ್ಟ್ರಾರ ಜನರಲ್ ಮತ್ತು ಜನಗಣತಿ ಆಯುಕ್ತರ ವತಿಯಿಂದ https://se.census.gov.in ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ಗಣತಿ ಕಾರ್ಯದಲ್ಲಿ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ
