ಭರ್ತಿಯಾದ ಕೃಷ್ಣ ಮಲಪ್ರಭೆ ಒಡಲು ಪ್ರವಾಸಿಗರ ಆಕರ್ಷಣೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪ್ರೇಕ್ಷಣೀಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾದ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿಗಳು ಸಂಗಮವಾಗುತ್ತದೆ ನಿರಂತರ ಮಳೆಯಿಂದಾಗಿ ಕೂಡಲಸಂಗಮದ ಕೃಷ್ಣ ಮಲಪ್ರಭೆ ಒಡಲು ಈಗ ಭರ್ತಿಯಾಗಿದೆ 

ಪಶ್ಚಿಮ ಘಟ್ಟಗಳಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಮತ್ತು ಮಲಪ್ರಭಾ ನದಿಗಳು ಏಕಕಾಲಕ್ಕೆ ಹರಿಯುತ್ತಿರುವುದರಿಂದ ಬಸವಣ್ಣನವರ ಐಕ್ಯ ಮಂಟಪದ ಸುತ್ತಮುತ್ತ ಜಲರಾಶಿ ಸುತ್ತುವರೆದುಕೊಂಡಿದೆ

ಕಳೆದ 20 ದಿನಗಳ ಹಿಂದೆ ಹುಬ್ಬಳ್ಳಿ ಮತ್ತು ಗದಗ ಭಾಗದಲ್ಲಿ ಸುರಿದ ಮಳೆಯಿಂದಾಗಿ ಮಲಪ್ರಭಾ ನದಿ ತುಂಬಿ ಹರಿದಿತ್ತು ಇದೀಗ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ
1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 
65,000 ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಬರುತ್ತಿರುವುದರಿಂದ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಕೂಡಲಸಂಗಮದ ಬಸವಣ್ಣವರ ಐಕ್ಯ ಮಂಟಪದ ಸುತ್ತಮುತ್ತ ನೀರು ಆವರಿಸಿಕೊಂಡಿರುವುದು ನೋಡುಗರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವುದರಿಂದ ಪ್ರವಾಸಿಗರಿಂದ ಆಕರ್ಶಿತವಾಗಿದೆ. 

 ಕೂಡಲಸಂಗಮಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 60 km ಅಂತರದಲ್ಲಿದೆ ಹೊಸಪೇಟೆ ಮೂಲಕ ಬರುವವರು ಹುನಗುಂದ ದಿಂದ 25 ಕಿ.ಮೀ ಅಂತರದಲ್ಲಿದೆ ನೀವು ಒಮ್ಮೆ ಬಂದು ನೋಡಿ 

ವರದಿ ಶಂಕರ್ ವನಕಿ ಕಮತಗಿ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!