ಆಲಮಟ್ಟಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳ ಮನವಿ


ವಿಜಯಪುರ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ  ಕೃಷ್ಣಾನದಿಗೆ ಈ ವರ್ಷ ಇದೆ ಮೊದಲಬಾರಿ 1 ಲಕ್ಷ ಕ್ಯೂಸೆಕ್ ನೀರನ್ನು ಎಲ್ಲ 26 ಗೇಟಗಳ ಮೂಲಕ  ನಾರಾಯಣಪುರ ಜಲಾಶಯಕ್ಕೆ ಇಂದು ಶನಿವಾರ ಮದ್ಯಾಹ್ನದಿಂದಲೆ ಬಿಡುಗಡೆ ಮಾಡಲಾಗುತ್ತಿದೆ  

    ಕೃಷ್ಣಾ ನದಿಯ ತೀರದ ಮೇಲಿರುವ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ 

ಮಹಾರಾಷ್ಟ್ರದ ಕೃಷ್ಣಾ ನದಿಯ ಪಾತ್ರದ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಹೇರಳವಾಗಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕಗಿಂತಲು ಅಧಿಕ ನೀರು ಹರಿದು ಬರುತ್ತಿದ್ದು ನಿಧಾನವಾಗಿ ಬಾಗಲಕೋಟೆ ಹಳೆ ನಗರಕ್ಕೆ ಹಿನ್ನೀರು ಏರತೊಡಗಿದೆ 


   519.6 ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ ಈಗ 518 ಮೀಟರ್ ಜಲರಾಶಿ ಸಂಗ್ರಹವಾಗಿದೆ 
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಬಿಡುತ್ತಿದ್ದು  ಸುಮಾರು 261 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ  ಎಂದು KPCL ಅಧಿಕಾರಿಯಾಗಿರುವ ಚಂದ್ರಶೇಖರ ದೊರೆಯವರು 
ಖಡಕ್ ಕನ್ನಡ Digital ನ್ಯೂಸಗೆ  ತಿಳಿಸಿದ್ದಾರೆ 


ವರದಿ ಶಂಕರ್ ವನಕಿ ಕಮತಗಿ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!