ಗೌರವಿಸುವ ಗುಣ ಬೆಳೆಸಿಕೊಳ್ಳಿ : ಪ್ರೊಫೇಸರ್ ಕುಬಸದ


ಕಮತಗಿ: ತಂದೆ-ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಗುಣವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಡಿ. ಆರ್. ಕುಬಸದ ಹೇಳಿದರು.

ಪಟ್ಟಣದ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ತಿಂಗಳ ವಿಶೇಷ ಅತಿಥಿ ಕಾರ್ಯಕ್ರಮ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬುವಂತೆ ಹಿರಿಯರಿಗೆ ಗೌರವ ನೀಡುವದು ಒಳ್ಳೆಯ ನಡೆ ನುಡಿಯನ್ನು ಮಕ್ಕಳಿಗೆ ಶಿಕ್ಷಕರು ಬಾಲ್ಯದಲ್ಲಿಯೇ ಕಲಿಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತಾಧಿಕಾರಿ ಎ. ಎಸ್. ಕಲ್ಯಾಣಶೆಟ್ಟಿ ಮಕ್ಕಳು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.


ಮುಖ್ಯಗುರು ಬಿ. ಎಸ್. ನಿಡಗುಂದಿ, ಪೋಷಕ ಸಮಿತಿಯ ಸುಧಾ ಭಾಪ್ರಿ,ತಿಂಗಳ ಅತಿಥಿ ಕಾರ್ಯಕ್ರಮದ ಸಂಚಾಲಕ ವಿ. ಸಿ. ವಡವಡಗಿ ವೇದಿಕೆಯಲ್ಲಿದ್ದರು.

ಎಸ್. ಎಸ್. ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ. ಎಂ. ಕಟಗಿ ನಿರೂಪಿಸಿದರು. ಜ್ಯೋತಿ ಬಿದರಕುಂದಿ ಸ್ವಾಗತಿಸಿದರು.ಪ್ರಿಯಾಂಕ ದುದಗಿ ವಂದಿಸಿದರು.

ಸಿಬ್ಬಂದಿ ಎಚ್.ಎಚ್. ಗುಳೇದ, ಎಸ್. ಎ. ಗೌಡರ,ಎಸ್. ಎಸ್. ಗುತ್ತಿ,ಅಕ್ಷತಾ ತೋಟಗೇರ, ಭಾಗ್ಯ ಬೀಳಗಿ ಸೇರಿದಂತೆ ಇತರರು ಇದ್ದರು 

ವರದಿ ಶಂಕರ್ ವನಕಿ ಕಮತಗಿ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!