ಹಸಿರು ಸೊಪ್ಪನ್ನು ಬಳಸಿ ಆರೋಗ್ಯ ರಕ್ಷಿಸಿ ಕೆ. ಎಫ್. ಮಾಯಾಚಾರಿ

ಉತ್ತಮವಾದ ಆಹಾರ,ಉತ್ತಮವಾದ ಆರೋಗ್ಯ. ಪೌಷ್ಟಿಕಾಂಶ ಆಹಾರ ದೇಹದ ಆರೋಗ್ಯ ಮತ್ತು ಸಂಪತ್ತನ್ನು ಅವಲಂಭಿಸಿದೆ ಎಂದೂ  

ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್ ಮಾಯಾಚಾರಿ ಹೇಳಿದರು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಗಲಕೋಟೆ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ. ಇವರ ಸಂಯುಕ್ತ ಆಶ್ರಯದಲ್ಲಿ ಶಿರೂರ ಗೌಡರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಅರಿವು ಕುರಿತು ಆರೋಗ್ಯ ಶಿಕ್ಷಣ ಕಾಯ೯ಕ್ರಮದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಿ, ಏಕದಳ ಧಾನ್ಯಗಳಾದ ಗೋದಿ,ಕೆಂಪು ಅಕ್ಕಿ, ರಾಗಿ,ಜೋಳ,ಸಜ್ಜೆ, ಮೊಳಕೆ ಕಾಳುಗಳಾದ ಹೆಸರು,ಕಡಲೆ,ಅಲಸಂದೆ,ಹುರಳಿ,ಮುಂತಾದವು.ಆಯೋಡಿನ್ ಉಪ್ಪು ಹಸಿರು ತರಕಾರಿ ಮತ್ತು ಸೊಪ್ಪುಗಳು .ಪೌಷ್ಟಿಕಾಂಶ ಗಳಿರುವ ಹಸಿರು ಸೊಪ್ಪುಗಳಾದ,ಸಬ್ಬಸಿಗೆ, ಪುದೀನಾ,ಮೆಂತ್ಯದ ಸೊಪ್ಪು ,ನುಗ್ಗೆ ಸೊಪ್ಪು, ಪಾಲಕ್,ಮುಂತಾದ ಹಸಿರುಸೊಪ್ಪುಗಳು ಸ್ಥಳೀಯವಾಗಿಯೂ ಮತ್ತು ಕಡಿಮೆ ವೆಚ್ಚದಲ್ಲಿಯೂ ದೊರೆಯುತ್ತವೆ ಹಸಿರು ಸೊಪ್ಪುಗಳು ಹೆಚ್ಚು ಪ್ರಮಾಣದಲ್ಲಿ "ಎ" ಅನ್ನಾಂಗ,ಕಬ್ಬಿಣಾಂಶ, ಕ್ಯಾಲ್ಸಿಯಂ,"ಬಿ"ಅನ್ನಾಂಗ ಮತ್ತು "ಸಿ" ಅನ್ನಾಂಗಗಳನ್ನು ಒಳಗೊಂಡಿರುತ್ತವೆ. ಹಸಿರು ಸೊಪ್ಪುಗಳನ್ನು ಆಹಾರದಲ್ಲಿ ಸಾಕಷ್ಟು ಬಳಸುವುದರಿಂದ ಮಕ್ಕಳಲ್ಲಿ "ಎ " ಅನ್ನಾಂಗ ಕೊರತೆಯಿಂದ ಬರುವ ಅಂಧತ್ವ ತಡೆಗಟ್ಟಬಹುದು ಹಾಗೂ ಗಭಿ೯ಣಿ,ಬಾಣಂತಿಯರು ಮತ್ತು ಮಕ್ಕಳಿಗೆ ಬರುವ ರಕ್ತ ಹೀನತೆಯನ್ನು ನಿವಾರಿಸಬಹುದು ಹಸಿರು ಸೊಪ್ಪುಗಳನ್ನು ಹೇರಳವಾಗಿ ದಿನನಿತ್ಯವೂ ಆಹಾರದಲ್ಲಿ ಬಳಸುವುದರಿಂದ ಅನೇಕ ಪೌಷ್ಟಿಕಾಂಶಗಳ ಕೊರತೆಗಳನ್ನು

 ನಿವಾರಿಸಬಹುದು. ಮತ್ತು ಡೆಂಗಿ,ಜ್ವರದ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ನೀರು ಸಂಗ್ರಹಿಸುವ ತಾಣಗಳನ್ನು ವಾರಕ್ಕೆ ಎರಡೂ ಸಲ ತೊಳೆದು ನೀರು ಸಂಗ್ರಹಿಸಿ ಭದ್ರವಾಗಿ ಮಚ್ಚಿರಿ ಡೆಂಗಿ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂದು ಸಾಂಕ್ರಾಮಿಕ ರೋಗಳ ಕುರಿತು ಸಹ ವಿವವರವಾಗಿ ಮಾತನಾಡಿದರು, ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ. ಸುನೀತಾ ಮೆಣಸಗಿಯವರು ಗಭಿ೯ಣಿಯರು ಹಾಗೂ ಬಾಣಂತಿಯರು ಆಹಾರ ಸೇವನೇಗಳ ಬಗ್ಗೆ ಸಹ ವಿವರ ವಾಗಿ ತಿಳಿಸಿ ಮಕ್ಕಳಿಗೆ ಸಮಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಬೇಕು ಯಾವ ಮಗುವು ಲಸಿಕೆ ಯಿಂದ ವಂಚಿತ ವಾಗದಂತೆ ಎಲ್ಲಾ ತಾಯಿಯಂದಿರು ತಪ್ಪದೇ ಲಸಿಕೆ ಯನ್ನು ಹಾಕಿಸಬೇಕು ಬಾಣಂತಿಯರು ಮಗುವಿನ ಸವಾ೯ಂಗೀಣ ಬೆಳವಣಿಗೆ ತಾಯಂದಿರ ಜವಾಬ್ದಾರಿ ಹಾಗೂ ಬಾಲ್ಯ ವಿವಾಹದ ಕುರಿತು ಎಳೆವಯಸ್ಸಿನಲ್ಲಿಯೇ ಮದುವೆಯಾಗುವದರಿಂದ ಹೆಣ್ಣು ಮಕ್ಕಳಿಗೆ ಇನ್ನು ದೈಹಿಕವಾಗಿ


 ಬಲಹೊಂದಿಲ್ಲದೆ,ಇರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ ಬಾಲ್ಯ ವಿವಾಹವನ್ನು ತಡೆಗಟ್ಟಿ, ಮತ್ತು ಕುಟುಂಬ ಕಲ್ಯಾಣ ಯೋಜನೆ ಗಳನ್ನು ಸಹ ವಿವರವಾಗಿ ತಿಳಿಸಿದರು. ಕಾಯ೯ಕ್ರಮದಲ್ಲಿ ಬಾಲ ವಿಕಾಸ ಸಲಹಾ ಸಮಿತಿಯ ಸದಸ್ಯರಾದ ರುಕ್ಮವ್ವ.ಗುಲಗಂಜಿ, ಶಿವಗಂಗಾ ಆಸ್ಪತ್ರೆಯ ಇಂಟನ೯ ವೈದ್ಯರು, ಈರಣ್ಣ. ಬಿದರಿ ಅಂಗನವಾಡಿ ಕಾಯ೯ಕತೆ೯ಯರಾದ ಹನಮ್ಮವ್ವ.ಆಲೂರ, ರತ್ನಮ್ಮ.ಗುಲಗಂಜಿ,  ಆಶಾ ಕಾಯ೯ಕತೆ೯ಯರಾದ ಲಕ್ಷ್ಮೀ.ಗೌಡರ, ಸುಮಾ ಗಾಳಿ, ಲಕ್ಷ್ಮೀ.ಕೋಟೆಕಲ್ಲ, ವಿಶಾಲಾಕ್ಷಿ. ಇಲಾಳಮಠ, ವಿಜಯಲಕ್ಷ್ಮಿ.ಸುಳಿಭಾವಿಮಠ, ಗಭಿ೯ಣಿಯರು, ಬಾಣಂತಿಯರು, ತಾಯಂದಿರು, ಬಾಗವಹಿಸಿದ್ದರು.
ವರದಿ ಶಂಕರ್ ವನಕಿ ಕಮತಗಿ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!