ಕಮತಗಿಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ

  

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಗೊಂದಳಿ ಸಮಾಜದ ಆರಾಧ್ಯ ದೇವತೆಯಾದ ದುರ್ಗಾದೇವಿಯ ಆಷಾಡ ಮಾಸದ ಜಾತ್ರಾ ಮಹೋತ್ಸವ ಅಂಗವಾಗಿ ದುರ್ಗಾದೇವಿಯ ಭಾವಚಿತ್ರ ಮೆರವಣಿಗೆಯನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು 

ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುವ ಗೊಂದಳಿ ಸಮಾಜದ ಆರಾಧ್ಯ ದೇವತೆಯಾದ ದುರ್ಗಾದೇವಿಗೆ ಸಮಾಜ ಬಾಂಧವರು ಅಭಿಷೇಕ ಹಾಗೂ ವಿಶೇಷ ಪೂಜೆ ಮಹಾಮಂಗಳಾರತಿ ನಡೆಸುವರು ನಂತರ ದುರ್ಗಾದೇವಿಯ ಭಾವಚಿತ್ರವನ್ನು ಸಡಗರ ಸಂಭ್ರಮದಿಂದ ಮುತ್ತೈದಿಯರ ಕಳಷಾರತಿಗಳೊಂದಿಗೆ ಹಾಗೂ ಕುಂಭೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು

       ಕುಂಭೋತ್ಸವ ಮೆರವಣಿಗೆಗೆ ಕಮತಗಿಯ ಶ್ರೀ ಚನ್ನಬಸವೇಶ್ವರ ಹಿರೇಮಠದ ಷ.ಬ್ರ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಸವಣ್ಣಮ್ಮ ತಾಯಿ ಬಸರಕೋಡ ಅವರು ಚಾಲನೆ ನೀಡಿದರು 

ದುರ್ಗಾದೇವಿ ಭಾವಚಿತ್ರ ಮೆರವಣಿಗೆಯು ಕಮತಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು  

ಈ ಕಾರ್ಯಕ್ರಮದಲ್ಲಿ ಗೊಂದಳಿ ಸಮಾಜದ ಹಿರಿಯರು ಹಾಗೂ ಯುವಕರು ಮಹಿಳೆಯರು ಪಾಲ್ಗೊಂಡಿದ್ದರು


ವರದಿ - ಶಂಕರ್ ವನಕಿ ಕಮತಗಿ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!