ಮಹಾರಾಷ್ಟ್ರದಲ್ಲಿ ಮಳೆ ಉತ್ತರ ಕರ್ನಾಟಕದಲ್ಲಿ ಹೊಳೆ !

      


ಮಹಾರಾಷ್ಟ್ರ ಮತ್ತು ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಈಗ ಮಳೆಗಾವಿ ಜಿಲ್ಲೆಯಾಗಿದೆ ಇಂದು ಹೇಳಬಹುದು ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕರ್ನಾಟಕದ ಬೆಳಗಾವಿ ತೊಯ್ದು ತೊಪ್ಪೆಯಾಗಿದೆ 

ಕೃಷ್ಣಾ, ಘಟಪ್ರಭಾ, ಬಳ್ಳಾರಿ ನಾಲಾ, ಧೂಧಗಂಗಾ, ಭೀಮಾ ಮಲಪ್ರಭಾ ಹಿರಣ್ಯಕೇಶಿ, ಮಾರ್ಖಂಡಯ್ಯ ನದಿಳ ಭೋರ್ಗರೆತ ಹೆಚ್ಚಾಗಿದೆ 



     ಕರ್ನಾಟಕಕ್ಕೆ ಅಷ್ಟೇನು ಮಳೆ ಇಲ್ಲದಿದ್ದರು ಕೃಷ್ಣಾ ನದಿಯ ಭೋರ್ಗರೆತ ಮತ್ತು ಕೋಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬಿಡುತ್ತಿರುವುದರಿಂದ  ಬೆಳಗಾವಿ, ಚಿಕ್ಕೋಡಿ  ಬಾಗಲಕೋಟೆ ಜಿಲ್ಲೆಗಳ ಸುಮಾರು 100 ಕ್ಕೂ ಹೆಚ್ಚು ಹಳ್ಳಿಗಳು ಜಲಗಂಡಾಂತರಗಳನ್ನು ಎದುರಿಸಬೇಕಾದ ಪರೀಸ್ಥಿತಿ ಎದುರಾಗಿದೆ  

     ಮತ್ತೊಂದೆಡೆ ಘಟಪ್ರಭಾ ನದಿಯ ಭೋರ್ಗರೆತವು ವಿಪರೀತವಾಗಿದ್ದು ಗೋಕಾಕ ಪಟ್ಟಣದ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದು, 300 ಕ್ಕೂ ಹೆಚ್ಚು ಮನೆಗಳು 150 ಕ್ಕೂ ಹೆಚ್ಚು ಅಂಗಡಿಗಳು ಮುಳುಗಡೆಯಾಗಿವೆ   ಜನರಿಗೆ ಪುನರ್ವಸತಿ ಕಲ್ಪಿಸಲು ಕಾಳಜಿ ಕೇಂದ್ರಗಳನ್ನು ತರೆಯಲಾಗಿದ್ದು ಜನರು ವಾಹನಗಳ ಮೂಲಕ ತಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಸುರಕ್ಷತ ಸ್ಥಳಗಳಿಗೆ ಸಾಗುತ್ತಿದ್ದಾರೆ 

     ಗೋಕಾಕ್‌ ಪಟ್ಟಣದಿಂದ ಸಂಕೇಶ್ವರ ಮಾರ್ಗ ಕಲ್ಪಿಸುವ ಹುಬ್ಬಳ್ಳಿ ಸಂಕೇಶ್ವರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು ಸಂಚಾರ ನಿರ್ಬಂದಿಸಲಾಗಿದೆ ಹಾಗೂ ಮುಧೋಳ ದಿಂದ ಯಾದವಾಡ ಸಂಪರ್ಕ ಕಲ್ಪಿಸಯವ ರಸ್ತೆಯ  ಮೇಲೆಯು ಕೂಡಾ ಘಟಪ್ರಭಾ ನದಿ ನೀರು ಹರಿಯುತ್ತಿದೆ ಇದರ ಮೇಲೆ ಯುವಕರ ಹುಚ್ಚು ಸಾಹಸಗಳು ಕಂಡು ಬರುತ್ತಿದ್ದು ಪೂಲೀಸರು ಬ್ಯಾರಿಕೇಡ್‌ ಹಾಕಿ ಬ್ರಿಜ್‌ ಮೇಲೆ ಯಾರು ತೆರಳದಂತೆ ಕಟ್ಟೆಚ್ಚರ ವಹಿಸಿದ್ದಾರೆ 



   ಇನ್ನೊಂದೆಡೆ ಆಲಮಟ್ಟಿಯ ಕೃಷ್ಣಾ ನದಿಯ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದಿಂದ 3.5 ಲಕ್ಷ ಕ್ಯೊಸೆಕ್‌ ನೀರು ಹೊರ ಬಿಡಲಾಗಿದ್ದು ಜಲಾಶಯದಲ್ಲಿ ಈಗ ಅರ್ಧದಷ್ಟು ನೀರು ಖಾಲಿಯಾಗಿದೆ 







ವರದಿ - ಖಡಕ್ ಕನ್ನಡ Digital ಡೆಸ್ಕ್ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!