ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷ - ಉಪಾಧ್ಯಕ್ಷ ಅವಿರೋಧ ಆಯ್ಕೆ


ತೀವ್ರ ಪೈಪೋಟಿ ನಡೆದಿದ್ದ ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ 
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ 

ರಮೇಶ ಜಮಖಂಡಿ ಅಧ್ಯಕ್ಷ ಗಾದಿ ಏರುವಲ್ಲಿ ಯಶಸ್ವಿಯಾದರು ಇಬ್ಬರ ನಡುವೆ ಮೂರನೆಯವರಿಗೆ ಲಾಭವೆಂಬಂತೆ ಉಪಾಧ್ಯಕ್ಷೆಯಾಗಿ ಶ್ರೀಮತಿ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ಆಯ್ಕೆಯಾದರು 

ಬಿಜೇಪಿ ಪಕ್ಷದ 4 ಜನ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಪ್ರಕ್ರಿಯೆಯಿಂದ ದೂರ ಉಳಿದರು

ಚುನಾವಣೆ ಪ್ರಕ್ರಿಯೆಯಲ್ಲಿ ಸಂಸದ ಪಿ ಸಿ ಗದ್ದಿಗೌಡರ್ ಗೈರುಹಾಜರಿಯಾಗಿದ್ದರು  

ಶಾಸಕ ಎಚ್ ವೈ ಮೇಟಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು 

16 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ವಾರ್ಡ್ ನಂಬರ್ 6 ರ ಸದಸ್ಯ ರಮೇಶ್ ಜಮಖಂಡಿ ಹಾಗೂ ವಾರ್ಡ್ ನಂಬರ್ 15ರ ಸದಸ್ಯೆ ಶ್ರೀಮತಿ ನೇತ್ರಾವತಿ ದೇವಿಪ್ರಸಾದ್ ನಿಂಬಲಗುಂದಿ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು



ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಣೆಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ದೇವಸ್ಥಾನಗಳಿಗೆ ಭೇಟಿ ನೀಡುವುದರ ಮೂಲಕ ಆಚರಿಸಿದರು 

ಚುನಾವಣೆ ಮುಗಿದ ನಂತರ ವಿಜಯೋತ್ಸವದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಮುಖಂಡರಾದ ಶಂಕರಲಿಂಗಪ್ಪ ಮಂಕಣಿ. ಹುಚ್ಚಪ್ಪ ಸಿಂಹಾಸನ ಗೋಪಾಲ ವನಕಿ ಸೇರದಂತೆ ಪಟ್ಟಣ ಪಂಚಾಯತ್ ಸದಸ್ಯರಾದ ಹುಚ್ಚವ ಹಗೇದಾಳ, ಲಕ್ಷ್ಮಣ ಮಾದರ, ಗುರುಲಿಂಗಪ್ಪ ಪಾಟೀಲ, ಬಸವರಾಜ ಕುಂಬಳಾವತಿ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದು ಕುರಿ ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದರು . 



ಹುನಗುಂದ ತಹಶೀಲ್ದಾರ್ ನಿಂಗಪ್ಪ ಬಿರಾದಾರ್ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಮತಗಿಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕ್ರುದ್ದೀನ್ ಹುಲ್ಲಿಕೆರಿ ಉಪಸ್ಥಿತರಿದ್ದರು.  


ವರದಿ ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!