ಹೆಣ್ಣು ಮಕ್ಕಳಿಗೆ ಭದ್ರತೆ ನೀಡಿ. ಡಾ. ನಾಗಲಕ್ಷ್ಮಿ ಚೌದರಿ

 


ಬಾಗಲಕೋಟೆ: ಹೆಣ್ಣು ಮಕ್ಕಳಿಗೆ ಭದ್ರತೆ ನೀಡುವ ವ್ಯವಸ್ಥೆಯನ್ನು ಆಧ್ಯತೆ ಮೇರೆಗೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು

ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಮಂಗಳವಾರದಂದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಮಹಿಳೆಯರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಧಿಕಾರಿ ಹೆಚ್ಚಿನ ಗಮನ ನೀಡಬೇಕು. ಸ್ಥಳಿಯ ಪೊಲೀಸ್ ಠಾಣೆಗಳಿಗೆ ಮಹಿಳೆಯರು ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ಜೀವಗಳಿಗೆ ಸರಿಯಾಗಿ ಸ್ಪಂದಿಸುವ ಮೂಲಕ ಮಹಿಳಾ ಸ್ನೇಹಿ ಪೊಲೀಸ್ ಠಾಣೆಗಳು ಆಗುವಂತಹ ವ್ಯವಸ್ಥೆಯಾಗಬೇಕು ಎಂದರು.


ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಮತ್ತು ಖಾಸಗಿ ಮಹಿಳಾ ವಸತಿ ನಿಲಯಯಗಳಲ್ಲಿ ಶಿಷ್ಠಾಚಾರದಂತೆ ಜಾಗೃತಿ ಒದಗಿಸುವ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಸುರಕ್ಷತೆ ಹಿತದೃಷ್ಠಯಿಂದ ಸಿಸಿ ಟಿವಿ ಇರುವುದು ಹಾಗೂ ವಾರ್ಡನ್‍ಗಳು ಮೊಬೈಲ್ ಆಪ್ ಬಳಸುವ ಕಾರ್ಯವಾಗಬೇಕು. ಸ್ಟ್ಯಾಂಡ್‍ರ್ಡ ಪ್ರೋಟೋಕಾಲ್ ಅನುಸರಿಸಲೇಬೇಕು, ಇಲ್ಲದಿದ್ದಲ್ಲಿ ಅಂತಹ ವಸತಿ ನಿಲಯಗಳ ಮೇಲೆ ಕ್ರಮ ಕೈಗೊಳ್ಳುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಮಹಿಳೆಯರ ಸಹಾಯಕ್ಕಾಗಿ ಇರುವ ಸಹಾಯವಾಣಿ ಸಂಖ್ಯೆ ಮತ್ತು Appes ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಲ್ಲಿ ಕೂಡ ಇವುಗಳ ಕುರಿತು ಮಾಹಿತಿ ಇರುವದಿಲ್ಲಿ . ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯ, ಶಾಲಾ ಕಾಲೇಜು ಏನೇ ಇರಲಿ ಅಲ್ಲಿ ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಿ ಸ್ನೇಹಮಯ ವಾತಾವರಣ ಸೃಷ್ಠಿಸಿಸಬೇಕು ಎಂದರು.


ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಇನ್ನೂ ಕಂಡು ಬರುತ್ತಿಲ್ಲ, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಎಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲವೋ ಅಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯ ಮಾಡಬೇಕು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಕೆ ಪ್ರಭಾಕರ ಇದ್ದರು

ನಮ್ಮ ಪ್ರತಿನಿಧಿ - ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!