ಗಣೇಶೋತ್ಸವದ ಶಾಂತಿ ಸಭೆ

 


ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಿಂದ ಸಾರ್ವಜನಿಕರು ಪಾಲಿಸಬೇಕಾದ ಸೂಚನೆಗಳು.



ಗಣೇಶಮಂಡಳಿಯ ವ್ಯವಸ್ಥಾಪಕರುಹಾಗೂಸರ್ವಜನಿಕರ ಪ್ರತಿವರ್ಷ ನಿಯಮಗಳನ್ನು ಪಾಲಿಸಿಕೊಂಡು ಬಂದಂತೆ ಈ ವರ್ಷವೂ ಕೂಡ ಶಾಂತಿ ಸಭೆಗಳಲ್ಲಿ ಪ್ರಸ್ತಾಪಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.

ಧ್ವನಿವರ್ಧಕಗಳ ಶಬ್ದವು ಕಾನೂನಿನಲ್ಲಿ ತಿಳಿಸಿದ ಮಿತಿಯಲ್ಲಿ ಇರುವಂತೆ ಬಳಸುವುದು. ಹಾಗೂ ರಾತ್ರಿ 10 ಗಂಟೆಯ ನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

 ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ಕೈಗೊಂಡ ಕ್ರಮಗಳು* ಪ್ರತಿ ಗ್ರಾಮ ಮಟ್ಟದಲ್ಲಿ ಬೀಟ್ ಸಿಬ್ಬಂದಿಯವರಿಂದ ಠಾಣಾ ಹಾಗೂ ವೃತ್ತ ಕಚೇರಿಗಳಲ್ಲಿ ಠಾಣಾಧಿಕಾರಿಯವರಿಂದ ಹಾಗೂ ಜಿಲ್ಲಾಡಳಿತದ ವತಿಯಿಂದ ಗಣೇಶ ಮಂಡಳಿಯ ಹಾಗೂ ಎಲ್ಲಾ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗಿರುತ್ತದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಗಳನ್ನು ಗುರುತಿಸಿ, ಸ್ಥಳೀಯ ಪೊಲೀಸ್ ಬಲದೊಂದಿಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ಸಿಬ್ಬಂದಿರವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಗಣೇಶ ಮೂರ್ತಿ ವಿಸರ್ಜನಾ ಮಾರ್ಗದಲ್ಲಿ ಸಾಕಷ್ಟು ಬೆಳಕು ಇರುವಂತೆ ಹಾಗೂ ಸಿ.ಸಿ. ಕ್ಯಾಮರಾ ಕಣ್ಣಾವಲಿನಲ್ಲಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳನ್ನು ಡೋಣ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಲಾಗುವುದು.



ಹಿಂದಿನ ಗಣೇಶೋತ್ಸವ ಆಚರಣೆ ಸಂದರ್ಭಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಂತಹವರ ಪಟ್ಟಿ ಮಾಡಿ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಪತಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಂಟಪದಲ್ಲಿ ತುರ್ತು ಸಹಾಯಕ್ಕಾಗಿ ಸಂಬಂಧಪಟ್ಟ ಬೀಟ್ ಸಿಬ್ಬಂದಿಯವರ ಮೊಬೈಲ್ ಸಂಖ್ಯೆ ಹಾಗೂ ತುರ್ತು ಸಹಾಯವಾಣಿ ERSS-112ಸಂಖ್ಯೆಗಳನ್ನು ನಮೂದಿಸಿರುವ ಪೋಸ್ಟರ್‌ಗಳನ್ನುಅಂಟಿಸಲಾಗುವುದು ಎಂದರು 

ಕಮತಗಿ ವರದಿ

ಕಮತಗಿ ಪಟ್ಟಣ ಪಂಚಾಯತ ಸಭಾಭವನದಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಶಾಂತಿ ಸಭೆ ಜರುಗಿತು ಅಮೀನಗಡ ಪಿಎಸ್ಐ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ಕಮತಗಿ ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರು ಮತ್ತು ವಿವಿಧ ವಿನಾಯಕ ಸಂಘಗಳ ಮುಖ್ಯಸ್ಥರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು



ನಮ್ಮ ಪ್ರತಿನಿಧಿ - ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!