ಗುಳೇದಗುಡ್ಡ ಪುರಸಭೆಗೆ ಲಗ್ಗೆ ಇಟ್ಟ ಜೆಡಿಎಸ್

   



ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಗುಳೇದಗುಡ್ಡ ಪುರಸಭೆಯನ್ನು ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳುವುದರ ಮುಖಾಂತರ ಜಿಲ್ಲೆಯಲ್ಲಿ ತನ್ನ ಖಾತೆ ತೆರೆದಿದೆ  

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶ್ರೀಮತಿ ಜ್ಯೋತಿ ಆಲೂರು ಹಾಗೂ ಶ್ರೀಮತಿ ವಂದನ ಭಟ್ಟಡ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಮತಿ ಜ್ಯೋತಿ ರಾಘವೇಂದ್ರ ಗೋವಿನಕೊಪ್ಪ ನಾಮಪತ್ರ ಸಲ್ಲಿಸಿದ್ದರು 


ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೆ ನಾಮಪತ್ರ ಸಲ್ಲಿಕೆಯಾಗದಿರುವುದರಿಂದ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿಲ್ಲ 


ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಜ್ಯೋತಿ ಆಲೂರು ಮತ್ತು ವಂದನ ಭಟ್ಟಡ 

ಇವರ ನಾಮಪತ್ರ ಯಾವ ಸ್ಥಾನಕ್ಕೆ ಸ್ಪರ್ಧಿಸುತಿದ್ದೇವೆ ಎಂದು ಉಲ್ಲೇಖ ಇಲ್ಲದ ಕಾರಣ ನಾಮಪತ್ರ ತಿರಸ್ಕೃತವಾಗಿವೆ


ಜೆಡಿಎಸ್ ಅಭ್ಯರ್ಥಿಯಾದ ಶ್ರೀಮತಿ ಜ್ಯೋತಿ ರಾಘವೇಂದ್ರ ಗೋವಿನಕೊಪ್ಪ ಅವರ ನಾಮಪತ್ರ ಅಂಗೀಕಾರವಾಗಿದ್ದರಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ


ಅವಿರೋಧವಾಗಿ ಆಯ್ಕೆಯಾದ 

 ಶ್ರೀಮತಿ ಜ್ಯೋತಿ ರಾಘವೇಂದ್ರ ಗೋವಿನಕೊಪ್ಪ ಅವರಿಗೆ ಬಾಗಲಕೋಟೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಅಭಿನಂದಿಸಿ ಸನ್ಮಾನಿಸಿದರ.



ಬೆಂಬಲಿಗರ ಸಂಭ್ರಮ 


ಜೆಡಿಎಸ್ ಅಭ್ಯರ್ಥಿಯಾದ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಜ್ಯೋತಿ ರಾಘವೇಂದ್ರ ಗೋವಿನಕೊಪ್ಪ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು


ನಮ್ಮ ಪ್ರತಿನಿಧಿ - ಸಂತೋಷ ಕಲಾಲಬಂಡಿ ಗುಳೇದಗುಡ್ಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!