ವಿಶ್ವ ಸೋಳ್ಳೆ ದಿನಾಚರಣೆ

 


ಜಿಲ್ಲಾ ಆಡಳಿತ ಬಾಗಲಕೋಟೆ, ಜಿಲ್ಲಾ ಪಂಚಾಯತ ಬಾಗಲಕೋಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು , ಬಾಗಲಕೋಟೆ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ. ಮುರಾರ್ಜಿ ದೇಸಾಯಿ ವಸತಿ ಶಾಲೆ, ಶಿರೂರ. ಹಾಗೂ ಸರಕಾರಿ ಪ್ರೌಢಶಾಲೆ ಇವರ ವತಿಯಿಂದ ನೀಲಾನಗರದಲ್ಲಿ  ಹಮ್ಮಿಕೊಂಡಿದ್ದ ವಿಶ್ವ ಸೋಳ್ಳೆ ದಿನ. ಕಾಯ೯ಕ್ರಮದಲ್ಲಿ. ಆರೋಗ್ಯ ನಿರೀಕ್ಷಣಾಧಿಗಳಾದ ಕೆ.ಎಫ್.ಮಾಯಾಚಾರಿ 1897 ರ ಅಗಷ್ಟ 20 ರಂದು ಸರ್ ರೊನಾಲ್ಡ್ ರಾಸ್ ರವರು ಹೆಣ್ಣು ಅನಾಫಿಲೀಸ್ ಸೋಳ್ಳೆಗಳಿಂದ. ಮಲೇರಿಯಾ ಹರಡುತ್ತದೆ ಎಂದು ಕಂಡು ಹಿಡಿದು ವಿಶ್ವಕ್ಕೆ ತಿಳಿಸಿದರು




 ಆದ್ದರಿಂದ ಅಗಷ್ಟ 20 ನ್ನು ವಿಶ್ವ ಸೋಳ್ಳೆ ದಿನ ಎಂದು ಆಚರಿಸಲಾಗುತ್ತದೆ ಸೋಳ್ಳೆಗಳು ಮಲೇರಿಯಾ ಹರಡುವುದರ ಜೋತೆಗೆ ಡೆಂಗೀ, ಚಿಕುಂಗುನ್ಯಾ,ಮೆದುಳು ಜ್ವರ ಹಾಗೂ ಆನೆಕಾಲು ರೋಗ ಮುಂತಾದ ಮಾರಣಾಂತಿಕ ರೋಗಗಳನ್ನು ಹರಡುತ್ತದೆ ಇದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು ಸೋಳ್ಳೆಗಳಿಂದ ಹರಡುವ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮನೆಯ ಸುತ್ತ ಮುತ್ತ ನೀರು ನಿಂತ ಸ್ಥಳಗಳು ಸೋಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿದ್ದು ಸೋಳ್ಳೆಗಳ ಸಂಖ್ಯೆ ಯಲ್ಲಿನ ಹೆಚ್ಚಳವನ್ನು ತಪ್ಪಿಸಲು ಇದು ಅತ್ಯಗತ್ಯ ನಾವು ವಾಸಿಸುವ ಜಾಗ ಸ್ವಚ್ಚವಾಗಿದ್ದರೆ ಸೋಳ್ಳೆಗಳು ಮನೆಯೊಳಗೆ ಪ್ರವೇಸಿಸುವುದಿಲ್ಲ ಇದರಿಂದ ಅನೇಕ ರೋಗಗಳಿಂದ ದೂರವಿರಬಹುದು

ಸೋಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ ಮಲೇರಿಯಾ ,ಡೆಂಗೀ, ಚಿಕುಂಗುನ್ಯಾ, ಹಾಗೂ ಆನೆಕಾಲು ರೋಗಗಳಿಂದ ಮುಕ್ತಿ ಪಡೆಯಿರಿ ಎಂದೂ ಮಾತನಾಡಿ ವಿದ್ಯಾರ್ಥಿಗಳಿಗೆ ಸೋಳ್ಳೆ ನಿಯಂತ್ರಣ ಕುರಿತು ಪ್ರತಿಜ್ಞೆಯನ್ನು ಬೋಧಿಸಿದರು




 ಕಾಯ೯ಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಎಸ್.ಎಸ್.ಮೆನಸಗಿ  ಶಾಲೆಯ ಶಿಕ್ಷಕರಾದ ಎಮ್.ಟಿ.ಲಮಾಣಿ. 

ಸಿ ವಿ ಪಟ್ಟಣಶೆಟ್ಟಿ ಕೆ.ಎನ್.ಚನ್ನದಾಸರ  ಮಲ್ಲನಗೌಡ ಪೋಲಿಷ್  ವೀರೇಶ ರುದ್ರಸ್ವಾಮಿ, ಅಮರಸಾಬ ನದಾಫ, ಕೆ.ಎ.ಲಮಾಣಿ, ಎಸ್.ಆರ್.ಚೌಕಿಮಠ, ಮೌನೇಶ. ಬಡಿಗೇರ, ಶಾಲೆಯ ಎಲ್ಲಾ ಸಿಬ್ಬಂದಿ, ಆಶಾ ಕಾಯ೯ಕತೆ೯ಯರಾದ  ಮಂಜುಳಾ ಕಟ್ಟಿಮನಿ.  ಅನುಷಾ ಖಂಡೋಬಾ. ಹಾಗೂ ವಿಧ್ಯಾರ್ಥಿಳು ಬಾಗವಹಿಸಿದ್ದರು 


ನಮ್ಮ ಪ್ರತಿನಿಧಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!