ಗುಡೂರಲ್ಲಿ ಗುರುವಂದನಾ ಕಾರ್ಯಕ್ರಮ


 


ಶಿಕ್ಷಕರು ಬಹಳ ತಾಂತ್ರಿಕ ಶೈಲಿಯಲ್ಲಿ ಉಪನ್ಯಾಸಗಳ ಮೂಲಕ ಪರಿಕಲ್ಪನೆಗಳನ್ನು ವಿವರಿಸುವ ಬದಲು ತಮ್ಮ ತರಗತಿಗಳನ್ನು ಯಾವಾಗಲೂ ಆಸಕ್ತಿದಾಯಕ ಮತ್ತು ವಿನೋದಮಯವಾಗಿ ಮಾಡಿದಾಗಲೇ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣುವರು ಎಂದು ನಿವೃತ್ತ ಮುಖ್ಯ ಗುರುಗಳಾದ ಶ್ರೀ ಎಸ್ ಆರ್ ವಸ್ತ್ರದ ಹೇಳಿದರು.

      ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದ ಶ್ರೀ ಜಗದಂಬಾದೇವಿ ನೂತನ ಕಲ್ಯಾಣ ಮಂಟಪದಲ್ಲಿ ಸರಕಾರಿ ಕನ್ನಡ ಹಿರಿಯ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶಾಲೆ ಮತ್ತು ಎಮ್ ಜಿ ವಿ ಸಿ ಶಾಲೆ ಹಾಗೂ ಶ್ರೀ ಅ ಕೃ ಪೋ ಶ್ರೀ ಖೋಡೆ ಈಶ್ವರಸಾ ಪ್ರೌಢಶಾಲೆಯ ೨೦೦೧-೨೦೦೨ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಏಳಿಗೆಗಾಗಿ ಪ್ರತಿಯೊಬ್ಬ ಶಿಕ್ಷಕರು ತಾಂತ್ರಿಕ ಶೈಲಿಯೊಂದಿಗೆ ಗುರುಕುಲ ಮಾದರಿಯಲ್ಲಿ ಅಭ್ಯಾಸ ಮಾಡಿಸಬೇಕು. ಅಲ್ಲದೇ ಎಲ್ಲಾ ಸಮಯದಲ್ಲೂ ವಿದ್ಯಾರ್ಥಿಗಳನ್ನು ಹೆಚ್ಚು ತೊಡಗಿಸಿಕೊಳ್ಳಲು ಮತ್ತು ಎಚ್ಚರಗೊಳಿಸಲು ಆಟ ಆಧಾರಿತ ಕಲಿಕೆ ಮತ್ತು ಸ್ಪರ್ಧೆಗಳನ್ನು ಸೇರಿಸಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಂವಹನ ನಡೆಸಲು ಅವಕಾಶವನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.

        ನೀವು ಉದ್ಘಾಟನೆಗೆ ಬೆಳಗಿಸಿದ ಜ್ಯೋತಿಯಂತೆ ಸದಾ ನಿಮ್ಮ ಬದುಕು ಪ್ರಜ್ವಲಿಸಲಿ. ಆ ಜ್ಯೋತಿಯನ್ನು ಹಚ್ಚಲು ಮೇನದ ಬತ್ತಿ ಅವಶ್ಯ. ಹಾಗೆ ಜ್ಯೋತಿಯಿಂದ ಜ್ಯೋತಿಯಂತೆ ನೀವು ಸಹ ಮುಂದಿನ ಜನಾಂಗದ ಯುವಕ ಯುವತಿಯರಿಗೆ ಬೇಳಕಾಗಬೇಕಾಗಿದೆ ಎಂದು ನಿವೃತ್ತ ಮುಖ್ಯ ಗುರುಗಳಾದ ಎ.ಎಸ್.ಗಂಜಿಹಾಳ ತಿಳಿಸಿದರು.

                ನಿವೃತ್ತ ಶಿಕ್ಷಕ ಎ.ಎ.ಬದಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಗುರುರಾಜ ಚಿನಿವಾಲರ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ೨೦೦೧-೦೨ ನೇ ಸಾಲಿನ ವಿದ್ಯಾರ್ಥಿಗಳು ಸನ್ಮಾನ ಮಾಡಿ ಗೌರವಿಸಿದರು. ಜೊತೆಗೆ ವಿಧ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ನಂತರ ಸಿಹಿ ಬೋಜನದ ವ್ಯವಸ್ಥೆಯನ್ನು ಅಶ್ವಿನ್ ದಲಭಂಜನ ನೆರವೇರಿಸಿದರು. 

              ಕಾರ್ಯಕ್ರಮವನ್ನು ಬಸವರಾಜ ಕೆ ಅಂಗಡಿ ನಿರೂಪಿಸಿದ್ದು ಮಂಜುಳಾ ಬಲಕುಂದಿ ಪ್ರಾರ್ಥಿಸಿ., ಮೌನಾಚರಣೆಯ ಕಾರ್ಯವನ್ನು ಶಿವಲಿಂಗಯ್ಯ ಸೂಡಿ ನೆರವೇರಿಸಿದರು. ನಾಗರಾಜ ನಾಯಿನೇಗಲಿ ಸ್ವಾಗತಿಸಿ., ಸಿದ್ದು ಗಂಜಿಹಾಳ ವಂದಿಸಿದರು.

               ವಿಜಯ ರೋಣದ., ಮಂಜುನಾಥ ಪಾಟೀಲ., ಹುಸೇನಸಾಬ ಲಾಲಕೋಟಿ., ಅನುರಾಧಾ ದೊಡಮನಿ., ಸೈರಾಬಾನು ಮುಜಾವಾರ.,‌ ಪ್ರೇಮಾ ಕೂಡ್ಲಪ್ಪನವರ., ಮಂಜುನಾಥ ಬಳಿಗಾರ., ಪವನ ಪವಾರ., ಬಸವರಾಜ ಗದ್ದಿ., ಮಹಾಂತೇಶ ತಿಪ್ಪನ್ನವರ., ರಮೇಶ ಇಲಾಳ., ಮಹಿಬೂಬಸಾಬ ಗುಡದಾರಿ ಸೇರಿದಂತೆ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಶಿಕ್ಷಕ ವೃಂದ ಹಾಗೂ ಇತರರಿದ್ದರು.



      :ಶಿಕ್ಷಕರನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು 

              ಗುರುವಂದನಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಕರಡಿ ಮಜಲಿನೊಂದಿಗೆ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಯತ್ತ ಬರಮಾಡಿಕೊಳ್ಳಲಾಯಿತು.

                 ಶ್ರೀ ವಿಜಯ ಮಹಾಂತೇಶ ಮಠದಿಂದ ಪ್ರಾರಂಭವಾದ ಮೆರವಣಿಗೆಯೂ ಪ್ಯಾಟಿ ಬಸವೇಶ್ವರ ದೇವಾಲಯ., ಕಾಯಿಪಲ್ಯ ಮಾರುಕಟ್ಟೆ., ವಿಜಯ ಮಹಾಂತೇಶ ಬ್ಯಾಂಕ್., ನಾಗಪ್ಪನ ಕಟ್ಟಿ., ಹುಲ್ಲೇಶ್ವರ ದೇವಾಲಯ., ಬಸ್ ನಿಲ್ದಾಣ., ಹಳೆ ಸಿಂಡಿಕೇಟ್ ಬ್ಯಾಂಕ್., ಮಹಾತ್ಮಾ ಆಯಿಲ್ ಮಿಲ್., ಶ್ರೀ ಜಗದಂಬಾದೇವಿ ದೇವಾಲಯದ ಮಾರ್ಗವಾಗಿ ಶ್ರೀ ಜಗದಂಬಾದೇವಿ ನೂತನ ಕಲ್ಯಾಣ ಮಂಟಪವನ್ನು ತಲುಪಿತು.

ನಮ್ಮ ಪ್ರತಿನಿಧಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!