ಕಮತಗಿಯ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನ ಆಚರಣೆ





ಕಮತಗಿ - ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಇಂದು ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜ್ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಡಾ. ಮಹಂತ ಶಿವಯೋಗಿಗಳ ಜನುಮದಿನ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯನ್ನು ಸಭಾಭವನದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಶ್ರೀ ಎಸ್ ಕೆ ಮುತ್ತಲಗೇರಿ ಅವರು ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಪ್ರಮಾಣ ವಚನವನ್ನು ಬೋಧಿಸಿದರು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿರುವ ಶ್ರೀ ಎಸ್ ವಿ ಬಾಗೇವಾಡಿ ಅವರು ಡಾಕ್ಟರ್ ಮಹಾಂತ ಸ್ವಾಮಿಗಳು ಜಾತಿ ಮತ ಧರ್ಮ ಇವುಗಳನ್ನು ಮೀರಿ ಸುಮಾರು ವರ್ಷಗಳ ಕಾಲ ಭಾರತದಲ್ಲಿ ಮಾತ್ರವಲ್ಲವೇ ವಿದೇಶದಲ್ಲಿ ಮತ್ತು ಇಂಗ್ಲೆಂಡ್ ನಗರದಲ್ಲಿ ತಮ್ಮ ಜೋಳಿಗೆ ಹಿಡಿದು ಯಾವುದೇ ಹಣ ಬೇಡದೆ ತಮ್ಮ ದುಷ್ಟಗಳಾದ ತಂಬಾಕು ಸೇವನೆ ಮಧ್ಯ ಗುಟ್ಕಾ ಮುಂತಾದವುಗಳನ್ನು ಇದರಲ್ಲಿ ಹಾಕಿ ಎಂದು ಭಿಕ್ಷೆ ಬೇಡಿದರು ಇಂದಿನ ಮಕ್ಕಳು ಯುವಕರು ವಿದ್ಯಾರ್ಥಿಗಳು ದುಷ್ಟಗಳಿಗೆ ಬಲಿಯಾಗುತ್ತಾರೆ ಇದರಿಂದ ತಮ್ಮ ಕುಟುಂಬ ಕಣ್ಣೀರಲ್ಲಿ ಕೈ ತೊಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ ಹೀಗಾಗಿ ವಿದ್ಯಾರ್ಥಿಗಳುಉತ್ತಮವಾದ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು ವಿದ್ಯಾರ್ಥಿಗಳಾದ ಕುಮಾರಿ ವಂದಾಲ್ ಗುಬ್ಯಾಡಿ ಗುಳಬಾಳ ಆಕಾಶ ತಿಮ್ಮಾಪುರ್ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಶ್ರೀ ಬಿವಿ ಬಿರಕಬ್ಬಿ ಸಿಎಸ್ ಬಾಪ್ರೀ ಆಳ್ಳಿಚಂಡಿ ಉಪಸ್ಥಿತರಿದ್ದರು ಶ್ರೀ ಎಂ ಎಸ್ ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು ಎನ್ ಪಿ ಹುಲಮನಿಗೌಡರ ವಂದಿಸಿದರು

ವರದಿ - ಶಂಕರ್ ವನಕಿ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!