ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಯೋಜನೆ



ಕಮತಗಿ - 2024 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಇಲಾಖೆ ಬಾಗಲಕೋಟೆ,  ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ ಇದರ ವ್ಯಾಪ್ತಿಯ ನೀಲಾನಗರದಲ್ಲಿ ಸ್ತನ್ಯಪಾನ  (ಅಗಷ್ಟ 1 ರಿಂದ 7 ವರೆಗೆ) ಸಪ್ತಾಹ  ಕಾಯ೯ಕ್ರಮದ ದುಗಾ೯ದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು 



ಈ ಕಾಯ೯ಕ್ರಮದಲ್ಲಿ ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಎಫ್ ಮಾಯಾಚಾರಿ ಮಾತನಾಡಿದರು ಸ್ತನ್ಯಪಾನದ ಕುರಿತು ತಾಯಂದಿರಗೆ ಮಗು ಜನಿಸಿದ ಒಂದ ಘಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂಭಿಸಿ ಮತ್ತು ಆರು ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಮಾತ್ರ ನೀಡಿ ತಾಯಿಯ ಎದೆಹಾಲಿನಲ್ಲಿ ಶಿಶುವಿನ ಸದೃಢ ಬೆಳವಣಿಗೆ ಅಗತ್ಯವಾದ ಪೋಷಕಾಂಶಗಳು, 



ವಿಟಮಿನ್ , ಖನಿಜಾಂಶಗಳು ಅಡಕವಾಗಿವೆ ಸ್ತನ್ಯಪಾನ ನವಜಾತ ಶಿಶುಗಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ   ಸ್ತನ್ಯ ಪಾನವು ವಿಶೇಷವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಹೆಚ್ಚು ಪರಿಣಾಮಕಾರಿ  ಪ್ರತಿರಕ್ಷಣಾವಾಹಕಗಳನ್ನು ತಾಯಿ ಯಿಂದ ನೇರವಾಗಿ ಪಡೆಯುವುದು ಮೂಲಕ ಮಗುವಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತಾಯಿಯ ಎದೆಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿ ಮೇಲೆ ಯಾವುದೂ ಇಲ್ಲ

 2024 ರ ಘೋಷವಾಕ್ಯ ಕೊರತೆಗಳನ್ನು ಕೊನೆಗೊಳಿಸಿ ಸವ೯ರಿಗೂ ಸ್ತನ್ಯಪಾನ ಬೆಂಬಲ ನೀಡಿ ಎಂದೂ ಮಾತನಾಡಿದರು, 

ಇಂದು ಅಗಷ್ಟ  1 ರಂದು ಪೂಜ್ಯ ಮ.ನಿ.ಪ್ರ.ಡಾ ಮಹಾಂತ ಶಿವಯೋಗಿ ಸ್ವಾಮೀಜಿಗಳ ಜನ್ಮದಿದಂದು ಪ್ರತಿ ವಷ೯ ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಧ್ಯಪಾನ, ಮಾದಕದ್ರವ್ಯ, ತಂಬಾಕುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಹ ವಿವರವಾಗಿ ತಿಳಿಸಿ ಅವುಗ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಎಂದೂ ಪ್ರತಿಜ್ಞೆಯನ್ನು ಬೋಧಿಸಿದರು.



ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ  ಶ್ರೀಮತಿ ಎಸ್ ಎಸ್ ಮೆಣಸಗಿ ಮಾತನಾಡಿ ತಾಯಿಯ ಎದೆ ಹಾಲು ಮಗುವಿಗೆ ಮೊದಲನೆಯ ಲಸಿಕೆ ತಾಯಿ ಎದೆ ಹಾಲಿನಿಂದ ತಾಯಿ ಮಗುವಿನ ಬಾಂದವ್ಯ ಹೆಚ್ಚಿಸುತ್ತದೆ

 ಸ್ತನ್ಯಪಾನಬೆಂಬಲಿಸಿ ಸದೃಢ ಜಗತ್ತು ನಿಮಿ೯ಸಿ ಮಗುವಿಗೆ ನೀಡುವ ಚುಚ್ಚುಮದ್ದಿಗಿಂತ ಹೆಚ್ಚು ಶಕ್ತಿಶಾಲಿ ಅಮ್ಮನ ಹಾಲು ಮಗುವಿಗೆ ತಾಯಿ ಎದೆ ಹಾಲು ನೀಡುವುದು ಪ್ರತೀ ಅಮ್ಮನ ಜವಾಬ್ದಾರಿ ಸ್ತನ್ಯಪಾನ ಪ್ರಾರಂಭಿಸಿ ಶಿಶು ಮರಣ ತೆಗ್ಗಿಸಿ.ಎಂದೂ ಮಾತನಾಡಿದರು

ಕಾಯ೯ಕ್ರಮದಲ್ಲಿ,ಆಶಾ ಕಾಯ೯ಕತೆ೯ಯರಾದ ‌.  ಸುಮಿತ್ರಾ. ಪೂಜಾರಿ, ಮಂಜುಳಾ ಕಟ್ಟಿಮನಿ, ಸುಮಿತ್ರಾ ಲಮಾಣಿ, ಅನುಷಾ ಖಂಡೋಬಾ, ಅಂಗನವಾಡಿ ಕಾಯ೯ಕತೆ೯ಯರಾದ, ಸರೋಜಾ. ಜಾಧವ ಸಕೀಲಾ. ದೊಡಮನಿ, ಕವಿತಾ ಕಟ್ಟಿಮನಿ, ಈರಮ್ಮ. ಕಟ್ಟಿಮನಿ. ಸೀತಾಭಾಯಿ.ಮಾಳಗಿಮನಿ. ಮತ್ತು ಬಾಣಂತಿಯರು, ಹಿರಿಯರು ಭಾಗವಹಿಸಿದ್ದರು


ವರದಿ ಶಂಕರ್ ವನಕಿ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!