ಡೆಂಗಿ ಜ್ವರದ ಕುರಿತು ಆರೋಗ್ಯ ಅರಿವು ಕಾಯ೯ಕ್ರಮ



ಡೆಂಗಿ ಜ್ವರ ನಿಯಂತ್ರಣಕ್ಕೆ ಈಡಿಸ್ ಸೊಳ್ಳೆಗಳನ್ನು ಲಾವಾ೯ ಹಂತದಲ್ಲೇ ನಾಶ ಮಾಡಿ ಮುಂಜಾಗ್ರತಾ ಕ್ರಮ ಕೈ ಗೊಂಡಲ್ಲಿ ಸೊಳ್ಳೆ ನಿಯಂತ್ರಣ ಸಾದ್ಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್. ಮಾಯಾಚಾರಿ ಹೇಳಿದರು 

ಅವರು ಜಿಲ್ಲಾಡಳಿತ ಬಾಗಲಕೋಟೆ ಜಿಲ್ಲಾ ಪಂಚಾಯತ ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆ ಬಾಗಲಕೋಟೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಬಾಗಲಕೋಟೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ. ಉಪಕೇಂದ್ರ ಶಿರೂರ-ಬಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಾದ ಮುರಾ೯ಜಿ ದೇಸಾಯಿ ವಸತಿ ಶಾಲೆ, ಆಶ್ರಯ ಕಾಲೋನಿ ಹಿರಿಯ ಪ್ರಾಥಮಿಕ ಶಾಲೆ, ಶಿರೂರ. ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಪೂರ. ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ, ಪ್ರೌಢ ಶಾಲೆ,ನೀಲಾನಗರದ ಗ್ರಾಮದಲ್ಲಿ    ಹಮ್ಮಿಕೊಂಡಿದ್ದ ಡೆಂಗೀ ಜ್ವರದ ಕುರಿತು ಜನಜಾಗೃತಿ ಕಾಯ೯ಕ್ರಮದಲ್ಲಿ ಮಾತನಾಡಿದರು 

ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಾಲಾ ಮಕ್ಕಳಿಗೆ ಡೆಂಗಿ ಜ್ವರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬಾಗಲಕೋಟೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ದಿನಾಂಕ 10-09-24 ಮಂಗಳವಾರದಂದು ಬೆಳಿಗ್ಗೆ ಪ್ರಾಥ೯ನೆಯ ನಂತರ ಆರೋಗ್ಯ ಅರಿವು ಮೂಡಿಸಿ ಡೆಂಗ್ಯೂ ತಡೆಗಟ್ಟುವ ಬಗೆಗಿನ ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ಡೆಂಗ್ಯೂ ರೋಗಲಕ್ಷಣಗಳು ಮತ್ತು ಚಿಹ್ನೆಗಳು ರೋಗವನ್ನು ತಡೆಗಟ್ಟುವ ಕ್ರಮಗಳು ಮತ್ತು ಅದರ ವ್ಯಾಪಕ ಹರಡುವಿಕೆಯನ್ನು ಹೇಗೆ ನಿಲ್ಲಿಸುವುದು ಎಂಬುದರ ಕುರಿತು ಜಾಗೃತಿ ಮೂಡಿಸಲಾಯಿತು.

ಸೊಳ್ಳೆ ಕಡಿತದಿಂದ ಪಾರಾಗುವುದೊಂದೇ ರೋಗ ನಿಯಂತ್ರಣಕ್ಕಿರುವ ಮುಖ್ಯ ದಾರಿ ಹಿಗಾಗಿ ಮೊದಲು ಸೊಳ್ಳೆಗಳ ನಿಯಂತ್ರಣದ ಬಗ್ಗೆ ಹೆಚ್ಚು ಗಮನ ವಹಿಸಬೇಕು, 

ಡೆಂಗ್ಯೂ ಜ್ವರವು ಈಡಿಸ್ ಸೊಳ್ಳೆಯ ಕಚ್ಚುವಿಕೆ ಯಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ,ಈ ರೋಗದ ಲಕ್ಷಣಗಳಾದ, ಜ್ವರ,ಕಣ್ಣುಗಳು ಕೆಂಪಾಗುವಿಕೆ,ಸ್ನಾಯುನೋವು ಕೀಲು ಮತ್ತು ಸಂದಿಗಳಲ್ಲಿ ನೋವು ಇಂತಹ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕೆ ಬಂದು ಪರಿಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು 

  ಮುಂಜಾಗ್ರತಾ ಕ್ರಮಗಳಾದ ಮೈ ತುಂಬ ಬಟ್ಟೆಯನ್ನು ಧರಿಸುವುದು ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೊಡಿಕೊಳ್ಳಬೇಕು, ತೆರದಿಟ್ಟ ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಪುನಃ ಭತಿ೯ಮಾಡಿ ಮುಚ್ಚಳದಿಂದ ಭದ್ರವಾಗಿ ಮುಚ್ಚುವುದು. ಡೆಂಗ್ಯೂ ಸೊಳ್ಳೆಗಳು ಶುದ್ಧ ಮತ್ತು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ, ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ತಿಳಿಸಿದರು, 

ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗ್ಯೂವನ್ನು ಸೋಲಿಸೋಣ ಎಂಬ ಘೋಷಣೆ ಯೊಂದಿಗೆ

 ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ! 

ಡೆಂಗ್ಯೂ ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ !

 ಸೊಳ್ಳೆ ಇಲ್ಲ ಎಂದರೆ ಡೆಂಗ್ಯೂ ಇಲ್ಲ ! 

ರಕ್ಷಣೆ ಸುರಕ್ಷತೆಯ ಕೀಲಿಯಾಗಿದೆ ಎಂದು ಜಾಗೃತಿ ಮೂಡಿಸಿದರು.ಕಾಯ೯ಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಎಸ್.ಎಸ್.ಮೆಣಸಗಿ, ಹಾಗೂ ಎಲ್ಲಾ ಶಾಲೆಯ ಮುಖ್ಯಗುರುಗಳಾದ ವ್ಹಿ.ಎಸ್.ಹಿರೇಮಠ, ಎಚ್.ಆರ್.ಮಾಚಾ, ಎಸ್.ಟಿ.ಕರಲಿಂಗನ್ನವರ, ಮತ್ತು ಎಲ್ಲಾ ಶಾಲೆಯ ಶಿಕ್ಷಕರು ಡೆಂಗಿ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂದು ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು ಕಾಯ೯ಕ್ರಮದಲ್ಲಿ , ಆಶಾ ಕಾಯ೯ಕತೆ೯ಯರು ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು


ವರದಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!