ಬಾಗಲಕೋಟೆ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ

 

ದಿನಾಚರಣೆ ಅಂಗವಾಗಿ ಸೆ.15ರ ರವಿವಾರ ಬಾಗಲಕೋಟೆ ಜಿಲ್ಲೆಯಲ್ಲಿ 95ಕಿ.ಮೀ. ಮಾನವ ಸರಪಳಿ ನಿರ್ಮಾಣ ಮಾಡಿ ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸರಕಾರದ ನಿರ್ದೇಶನದ ಮೇರೆ ರಾಜ್ಯಾದ್ಯಂತ ಏಕಕಾಲದಲ್ಲಿ ಬೃಹತ್ ಮಾನವ ಸರಳಿ ನಿರ್ಮಾಣಕ್ಕೆ ರೂಟ್ ನಕ್ಷೆ ನಿರ್ಮಿಸಿದ್ದು, ಆ ರೂಟ್ ನಕ್ಷೆನಂತೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಸೀತಿಮನಿ ಮಾರ್ಗವಾಗಿ ಸಾಲಹಳ್ಳಿವರೆಗೆ ಒಟ್ಟು 95 km ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಆ ದಿನ ಬೆಳಿಗ್ಗೆ 9:30 ರಿಂದ 10:30ರ ವರೆಗೆ ಮಾನವ ಸರಪಳಿ ರಚಿಸಲು ಉದ್ದೇಶಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ನಮ್ಮ ಸಂವಿಧಾನವು ಪ್ರತಿ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಹಾಗೂ ಅಭಿವೃದ್ದಿ, ಧರ್ಮದ ಸ್ವಾತಂತ್ರಂತ್ರ್ಯದ ಜೊತೆಗೆ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ದೊರಕಿಸಿ ಕೊಟ್ಟಿದೆ. ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಭಾರತದ ಕಟ್ಟ ಕಡೆಯ ವ್ಯಕ್ತಿಯ ಸ್ವಾತಂತ್ರಂ ನ್ಯಾಯ ಸಮಾನತೆಯನ್ನು ಸಾರುತ್ತದೆ. ಈ ಮಾನವ ಸರಪಳಿಯಲ್ಲಿ ಕನಿಷ್ಟ 1.25 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದ್ದಾರೆ.

ಈ ಮಾನವ ಸರಪಳಿಯಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು, ಸಿಬ್ಬಂದಿಯವರು, ಶಾಲಾ ಕಾಲೇಜಿನ ಶಿಕ್ಷಕಕರು ಸಹ ಸಿಬ್ಬಂದಿಯವರು ಇದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಮುಖಂಡರು, ಇತರೆ ಸಂಘ ಸಂಸ್ಥೆಯ ಮುಖಂಡರು, ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೇಲಿನ ದಾರಿಯಲ್ಲಿ ತಮಗೆ ಸಮೀಪವಾಗುವ ಸ್ಥಳದಲ್ಲಿ ಮಾನವ ಸರಪಳಿಯಲ್ಲಿ ಸ್ವ-ಇಚ್ಚೆಯಿಂದ ಭಾಗವಹಿಸಬೇಕು. ಈ ಮಾನವ ಸರಪಳಿಯು ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಪ್ರಾರಂಭವಾಗಿ ಸಾಲಹಳ್ಳಿಯವರೆಗೆ ಮುಕ್ತಾಯಗೊಳ್ಳುತ್ತದೆ.

 ಕನಿಷ್ಟ 95 ಕಿ.ಮೀ ಈ ಸರಪಳಿಯು ಇದ್ದು, ಹಂತಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. 9 ಗಂಟೆಗೆ ಮಾನವ ಸರಪಳಿ ನಿರ್ಮಿಸಿ  ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ  ಮಾನವ ಸರಪಳಿ ರೂಟ್ ನಕ್ಷೆ ವಿವರ

ವಿಜಯಪುರ ಜಿಲ್ಲೆಯ ಅಂತ್ಯದ ಆಲಮಟ್ಟಿಯಿಂದ ಸೀತಿಮನಿ 3km 

ಸೀತಿಮನಿಯಿಂದ ರಾಂಪೂರ 4km 

ರಾಂಪೂರ ನಿಂದ ಬಿಲ್ಲಕೆರೂರ 4km 

ಬಿಲ್ಲಕೆರೂರ ದಿಂದ ಭಗವತಿ 15km 

ಭಗವತಿಯಿಂದ ಸಂಗಮಕ್ರಾಸ್ 12km 

ಸಂಗಮಕ್ರಾಸ್‌ದಿಂದ ಬೇವಿನಮಟ್ಟಿ 2km

 ಬೇವಿನಮಟ್ಟಿಯಿಂದ ಸಿಕ್ಕೇರಿ 2km, 

ಸಿಕ್ಕೇರಿ ಯಿಂದ ಕದಾಂಪೂರ (೧ ಕಿ.ಮೀ), 

ಕದಾಂಪೂರದಿದ ನವನಗರ, ಎಪಿಎಂಸಿ 2km 

ನವನಗರ, ಎಪಿಎಂಸಿಯಿಂದ ಜಿಲ್ಲಾಡಳಿತ ಭವನ 5km,

 ಜಿಲ್ಲಾಡಳಿತ ಭವನದಿಂದ ವಿದ್ಯಾಗಿರಿ 4 ಕಿ.ಮೀ

 ವಿದ್ಯಾಗಿರಿಯಿಂದ ಬಿಟಿಡಿಎ 2 ಕಿ.ಮೀ 

ಬಿಟಿಡಿಎದಿಂದ ಗದ್ದನಕೇರಿಕ್ರಾಸ 7km, 

ಗದ್ದನಕೇರಿಕ್ರಾಸ್‌ ದಿಂದ ತುಳಸಿಗೇರಿ 4 ಕಿ.ಮೀ

 ತುಳಸಿಗೇರಿಯಿಂದ ಕಲಾದಗಿ 6km 

ಕಲಾದಗಿಯಿಂದ ಖಜ್ಜಿಡೋಣಿ 8 ಕಿ.ಮೀ 

ಖಜ್ಜಿಡೊಣಿಯಿಂದ ಲೋಕಾಪೂರ 8 ಕಿ.ಮೀ ಹಾಗೂ ಲೋಕಾಪೂರದಿಂದ ಸಾಲಹಳ್ಳಿವರೆಗೆ 10ಕಿ.ಮೀ ಸೇರಿ

 ಒಟ್ಟು 95 ಕಿ.ಮೀವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದು ಮಾನ್ಯ ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ ಕೆ ಎಂ ಅವರು ತಿಳಿಸಿದ್ದಾರೆ 


  ನಮ್ಮ ಪ್ರತಿನಿಧಿ ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!