ಸಂವಿಧಾನದ ಉಪನ್ಯಾಸ ಕಾರ್ಯಕ್ರಮ

 


ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿಪೂರ್ವ ಕಾಲೇಜ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ಸಂವಿಧಾನದ ಮೌಲ್ಯಗಳು ಸಂವಿಧಾನದ ಪೀಠಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು 


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಗವತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ರಾದ ಶ್ರೀ ಬಿ ವೈ ಕೆಳಗಿನಮನಿ ರಾಜ್ಯಶಾಸ್ತ್ರ ಉಪನ್ಯಾಸಕರು ಆಗಮಿಸಿ ಪ್ರತಿಯೊಂದು ದೇಶವು ಸಂವಿಧಾನವನ್ನು ಹೊಂದಿದ್ದು ಅದೇ ರೀತಿ ಭಾರತವು ತನ್ನದೇ ಆದ ವೈಶಿಷ್ಟ ಪೂರ್ಣ ಸಂವಿಧಾನವನ್ನು ಹೊಂದಿದೆ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಸರಕಾರದ ಅಂಗಗಳ ರಚನೆ ಸ್ವಾತಂತ್ರ್ಯ ಸಮಾನತೆ ಬ್ರಾತೃತ್ವ ಮೌಲ್ಯಗಳನ್ನು ನಮ್ಮ ಸಂವಿಧಾನದ ರಚನಾಕಾರರು ಬಹಳ ದೂರ ದೃಷ್ಟಿಯಿಂದ ರಚಿಸಲ್ಪಟ್ಟಿರುತ್ತಾರೆ ಇವುಗಳನ್ನು ಈ ಮೌಲ್ಯಗಳನ್ನು ಯುವ ಜನತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್ ವಿ ಬಾಗೇವಾಡಿ ಅವರು ಸಂವಿಧಾನವು ಮೂಲಭೂತ ಕಾನೂನು ಆಗಿದೆ ಸಂವಿಧಾನದಲ್ಲಿ ಅಳವಡಿಸಿರುವ ತತ್ವಗಳು ಉದ್ದೇಶಗಳು ರಾಷ್ಟ್ರ ಮತ್ತು ನಾಗರಿಕರಿಗೆ ಮಾರ್ಗದರ್ಶನ ನೀಡುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು 

ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯಸ್ಥರಾದ ಶ್ರೀ ಎಸ್ ಕೆ ಮುತ್ತಲಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ ವಿ ಬೀರಕಬ್ಬಿ  ಸುರೇಶ್ ಭಜಂತ್ರಿ ಉಪಸ್ಥಿತರಿದ್ದರು ವಿದ್ಯಾರ್ಥಿನಿಯರಾದ  ಎಂ ಎಸ್ ಶೆಟ್ಟರ್  ಕಾರ್ಯಕ್ರಮ ನಿರೂಪಿಸಿದರು  ಏನ್ ಪಿ ಹುಲಮನಿಗೌಡ್ರ ವಂದಿಸಿದರು

ನಮ್ಮ ಪ್ರತಿನಿಧಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!