ಬಾಗಲಕೋಟೆ: ಎರಡು ಬೈಕಗಳು ಮುಖಾಮುಖಿ ಡಿಕ್ಕಿ

 


ಬಾಗಲಕೋಟೆ: ಎರಡು ಬೈಕಗಳು ಮುಖಾಮುಖಿ ಢಿಕ್ಕಿ

ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ನವನಗರದಲ್ಲಿ ನಡೆದಿದೆ.ಮೃತರನ್ನು ರಜನಿ ವಂದಕುದರಿ(34), ಶೃತಿ ವಂದಕುದರಿ(32) ಹಾಗೂ ಅಭಿಷೇಕ ಧೋತ್ರಿ(20) ಎಂದು ಗುರುತಿಸಲಾಗಿದೆ.

ಶೃತಿ ವಂದಕುದರಿ ಬಾಗಲಕೋಟೆ ಬಸವೇಶ್ವರ ದಂತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು, ರಜನಿ  ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಅವರು ಸ್ಕೂಟಿ ವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದೆ ಆರ್‌ ಒನ್ ವೈವ್  ಬೈಕ್ ನಲ್ಲಿ ಬಂದ ಯುವಕರು ಢಿಕ್ಕಿ ಹೊಡೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಂದೀಪ ಹುಲಸಗೇರಿ ಎಂಬಾತನಿಗೆ ತೀವ್ರತರವಾದ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂಚಾರಿ ವಿಭಾಗದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ನಮ್ಮ ಪ್ರತಿನಿಧಿ - ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!