ಕಮತಗಿ ಪಟ್ಟಣ ಪಂಚಾಯತ ಸಾಮಾನ್ಯ ಸಭೆ

 ಕಮತಗಿ ಪಟ್ಟಣ ಪಂಚಾಯತ ಸಭಾಭವನದಲ್ಲಿ 2024 - 25 ನೇ ಸಾಲಿನ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿತ್ತು 

 ಪಟ್ಟಣ ಪಂಚಾಯತ ಅಧ್ಯಕ್ಷರಾದ ರಮೇಶ್ ಜಮಖಂಡಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು ಪಟ್ಟಣದ ವಿವಿಧ ರಸ್ತೆ ಕಾಮಗಾರಿ ಪೈಪ್ಲೈನ್ ಹಾಗೂ ಇನ್ನಿತರ ಕೆಲಸಗಳನ್ನು ಬೇಗ ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸುವಂತೆ ಪಟ್ಟಣ ಪಂಚಾಯತಿಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಪಟ್ಟಣದ ನೈರ್ಮಲತೆಗೆ ಹೆಚ್ಚಿನ ಒತ್ತು ಕೊಡುವಂತೆ ಎಲ್ಲ ಪಟ್ಟಣ ಪಂಚಾಯತ್ ಸದಸ್ಯರು ಕೈ ಜೋಡಿಸಿ ನಾಗರಿಕರೊಂದಿಗೆ ಸಹಕರಿಸಿ ಪಟ್ಟಣ ಅಭಿವೃದ್ಧಿ ಮಾಡೋಣ ಎಂದರು


ಇಂದಿನ ಸಭೆಯ ಪ್ರಮುಖ ಅಂಶಗಳಾದ


1. ಸಭೆಯಲ್ಲಿ 2024 - 25 ನೇ ಸಾಲಿನ SFC ಮತ್ತು ಸ್ಥಳೀಯ ನಿಧಿಯ 24%,  10%, 7.25%,  ಹಾಗೂ ಶೇಕಡ 5, ರ ಯೋಜನೆಯ ಫಲಾನುಭವಿಗಳ ಆಯ್ಕೆ ಮಾಡುವ ಕುರಿತು 


 2. 2024 25 ನೇ ಸಾಲಿನ SFC 15ನೇ ಹಣಕಾಸು ಮತ್ತು SWM. DPR ಯೋಜನೆಯ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಬಂದ ಗುತ್ತಿಗೆದಾರರ ಟೆಂಡರ್ ದರ ಅನುಮೋದನೆ ನೀಡುವ ಬಗ್ಗೆ


3. ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬಂದ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ 

ಹಾಗೂ ಸ್ಥಳೀಯ ನಾಗರಿಕರು ಆಸ್ತಿ ಮೇಲೆ ಭೋಜ ದಾಖಲು ಮಾಡಲು ದರ ನಿಗದಿ ಮಾಡಲಾಯಿತು









ಈ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಹುಚ್ಚವ್ವ ಹಗೆದಾಳ, ಲಕ್ಷ್ಮಣ ಮಾದರ, ಗುರುಲಿಂಗಪ್ಪ ಪಾಟೀಲ, ಬಸವರಾಜ ಕುಂಬಳಾವತಿ, ದೇವಿಪ್ರಸಾದ ನಿಂಬಲಗುಂದಿ, ಪ್ರಕಾಶ್ ಸಿನ್ನೂರ, ನಂದಾ ದ್ಯಾಮಣ್ಣವರ, ಸುಮಿತ್ರ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದು ಕುರಿ, ಸಂಗಪ್ಪ ಗಾಣಿಗೇರ, ಹುಚ್ಚೇಶ ಮದ್ಲಿ, ರತ್ನಾ ತಳಗೇರಿ, ಬಸವರಾಜ ದಂಡಾವತಿ, ಮಂಜು ವಡವಡಗಿ, ಸಂಗಪ್ಪ ಮೇದಾರ, ಸೇರಿದಂತೆ ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಎಫ್ ಎನ್ ಹುಲ್ಲಿಕೇರಿ ಆಡಳಿತಾಧಿಕಾರಿ ರಮೇಶ್ ಪದಕಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು

ಪಟ್ಟಣ ಪಂಚಾಯತ ಆಢಳಿತಾಧಿಕಾರಿ ರಮೇಶ್ ಪದಕಿ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿ ವಂದಿಸಿದರು


ವರದಿ ಶಂಕರ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!