ಗುಡೂರನಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ



 ಶ್ರೀ ಬನಶಂಕರಿ ದೇವಿ ದೇವಾಲಯದಲ್ಲಿ ಘಟಸ್ಥಾಪನೆ ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

             ಗುಡೂರ ಎಸ್ ಸಿ ಗ್ರಾಮದ ಶ್ರೀ ಬನಶಂಕರಿ ದೇವಿ ದೇವಾಲಯದಲ್ಲಿ ದಸರಾ ಮಹೋತ್ಸವದ ಆಚರಣೆಯ ಪ್ರಯುಕ್ತ ಅ. ೦೩ ರ ಅಶ್ವಿಜ ಶುದ್ಧ ಪ್ರತಿಪದದಂದು ದೊಡ್ಡಪ್ಪ ಕಳಸಾ ಅವರಿಂದ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ಹಾಗೂ ಅರ್ಚಕರಾದ ಮಲ್ಲಪ್ಪ ಬೆಲ್ಲದ ಇವರ ಸಾನಿಧ್ಯದಲ್ಲಿ ಬನಶಂಕರಿ ದೇವಿಗೆ ಅಭಿಷೇಕ., ಬೆಳ್ಳಿ ಕೀರಿಟ ಹಾಗೂ ಬೆಳ್ಳಿ ಪ್ರಭಾವಳಿ ಮತ್ತು ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಘಟಸ್ಥಾಪನೆ ಮಾಡಲಾಯಿತು.

          ಒಂಬತ್ತು ದಿನಗಳ ನಂತರ ಮಹಾನವಮಿ ದಿನದಂದು ಪುರಾಣ ಮಂಗಲ., ಮುತ್ತೈದೆಯರಿಗೆ ಬಳೆ., ಅರಿಶಿನ ಕುಂಕುಮ ನೀಡಿ ಉಡಿ ತುಂಬುವ ಕಾರ್ಯಕ್ರಮವು ಭಕ್ತ ಸಮ್ಮೂಹದಲ್ಲಿ ಸಂಪ್ರದಾಯಿಕವಾಗಿ ನಡೆಯಲಿದ್ದು ನಂತರದಲ್ಲಿ ಅನ್ನ ಪ್ರಸಾದದ ವ್ಯವಸ್ಥೆ ಇರುವುದು.

        ವಿಜಯ ದಶಮಿಯಂದು ಬನಶಂಕರಿ ದೇವಿಗೆ ಹೊಳೆಯಿಂದ ತಂದ ಜಲದಿಂದ ಮಹಾಭಿಷೇಕ ಹಾಗೂ ಮಹಾಮಂಗಳಾರತಿ ಕಾರ್ಯ ಮತ್ತು ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಇರುತ್ತದೆ. ಪ್ರತಿದಿನ ಸಂಜೆ ೭ ಗಂಟೆಗೆ ಪುರಾಣ ಪ್ರವಚ ಪ್ರಾರಂಭ., ನಂತರದಲ್ಲಿ ಗ್ರಾಮದ ಭಕ್ತರಿಂದ ಪ್ರತಿ ದಿನ ಅನ್ನ ಪ್ರಸಾದದ ವ್ಯವಸ್ಥೆ ಇರುವುದು.

                 ದಸರಾ ಮಹೋತ್ಸವದ ಆಚರಣೆಯಲ್ಲಿ ಶ್ರೀ ಬನಶಂಕರಿ ದೇವಿ ಕ್ಷೇಮಾಭಿವೃದ್ಧಿ ಸಂಘ ರಿ., ಶ್ರೀ ದೇವಲ ಮಹರ್ಷಿ ತರುಣ ಸಂಘ., ಹಾಗೂ ಬನಶ್ರೀ ಮಹಿಳಾ ಸಂಘಟನೆಯ ಕಾರ್ಯಕರ್ತರು., ಮಹಿಳೆಯರು., ಹಿರಿಯರು ಸೇರಿದಂತೆ ಗ್ರಾಮದ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.


ವರದಿ :- ಕಿರಣ ಕಳಸಾ ಗುಡೂರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!