ಬಾಗಲಕೋಟೆಯ ಆರೋಗ್ಯ ಇಲಾಖೆ ಸಹಾಯಕ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ

 *ಬಾಗಲಕೋಟೆಯ ಆರೋಗ್ಯ ಇಲಾಖೆ ಸಹಾಯಕ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ*

ಕರ್ತವ್ಯಕ್ಕೆ ಹಾಜರಾಗಲು ವರದಿ ಮಾಡಿಕೊಳ್ಳುವ ಸಂಬಂಧ ತಮ್ಮದೇ ಇಲಾಖೆಯ ನೌಕರನಿಗೆ 5 ಸಾವಿರ ರೂಪಾಯಿಗಳ ಲಂಚ ಕೇಳಿ ಪಡೆಯುತ್ತಿದ್ದಾಗ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಪೋಳ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.

ಆರೋಗ್ಯ ಇಲಾಖೆಯ ನೌಕರ ರಾಘವೇಂದ್ರ ಮಡಿವಾಳ ಕರ್ತವ್ಯಕ್ಕೆ ಅನಧಿಕೃತ ಗೈರು ಉಳಿದಿದ್ದರು, ಅವರನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಟಿಪ್ಪಣಿ ಮೂಲಕ ರಾಜಶ್ರೀ ಪೋಳ ಅವರಿಗೆ ಸೂಚಿಸಿದ್ದರು.

ಆದರೂ ರಾಘವೇಂದ್ರ ಮಡಿವಾಳ ಅವರನ್ನು ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲು ರಾಜಶ್ರೀ ಪೋಳು ವಿಳಂಬ ತೋರಿ ಸತಾಯಿಸಿದ್ದು, 5 ಸಾವಿರ ರೂಪಾಯಿ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮಡಿವಾಳರಿಂದ 5 ಸಾವಿರ ರೂಪಾಯಿ. ಲಂಚ ಪಡೆಯುವಾಗ ಲೋಕಾಯುಕ್ತ ಎಸ್ ಪಿ ಸತೀಶ ಚಿಟಗುಬ್ಬಿ ಅವರ ಮಾರ್ಗದರ್ಶನದ ತಂಡ ಬಲೆ ಬೀಸಿ

ಡಿವೈಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಸಿಪಿಐಗಳಾದ ಬಸವರಾಜ ಲಮಾಣಿ, ಬಸವರಾಜ ಮುಕಾರ್ತಿಹಾಳ ಸಿಬ್ಬಂದಿಗಳಾದ ಬಸವರಾಜ ದೇಸಾಯಿ, ನಾಗಪ್ಪ ಪೂಕಾರಿ, ಸಿದ್ದು ಮುರನಾಳ, ಮಂಜು ಜೋಕೆರ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ, ಹನಮಂತ ಹಲಗತ್ತಿ, ಶಿವಾನಂದ ಮುಷ್ಠಿಗೇರಿ, ರಾಮನಗೌಡ ಗೌಡರ, ವಿ.ಜಿ.ರಾಜನಾಳ, ಹನಮಂತ ಮಾಸರಡ್ಡಿ ಮತ್ತಿತರರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 


ವರದಿ ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!