ಮಹರ್ಷಿ ವಾಲ್ಮೀಕಿ ಮೌಲ್ಯಗಳ ಹರಿಕಾರ : ಎಚ್.ಕೆ.ಗುಡೂರ



ಮಹರ್ಷಿ ವಾಲ್ಮೀಕಿ ಮೌಲ್ಯಗಳ ಹರಿಕಾರ : ಎಚ್.ಕೆ.ಗುಡೂರ

ಬಾಗಲಕೋಟೆ : ಜಿಲ್ಲೆಯ ‍ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

       ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಎಚ್‌‌.ಕೆ.ಗುಡೂರ ಮಾತನಾಡುತ್ತಾ.ಜಗತ್ತಿಗೆ ಮಾನವೀಯ ಮೌಲ್ಯಗಳ ಹರಿಕಾರ ,ಭಾರತದ ಎರಡು ಕಾವ್ಯಗಳಲ್ಲಿ ಒಂದಾದ ರಾಮಾಯಣ ಕೃತಿಯನ್ನು ರಚಿಸಿದ ಆದಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಸೀಗೆ ಹುಣ್ಣುಮೆಯಂದು ಆಚರಿಸಲಾಗುತ್ತದೆ. ವಾಲ್ಮೀಕಿ ರಾಮಾಯಣ ಕಲ್ಪವೃಕ್ಷವಿದ್ದಂತೆ.ಮನುಕುಲಕ್ಕೆ ಬೇಕಾದ ಆರ್ದಶಗಳು ,ಸಾಮಾಜಿಕ ಮೌಲ್ಯಗಳು ಈ ಮಹಾಕಾವ್ಯದಲ್ಲಿವೆ. ಎಂದರು.

       ಸಿ.ಆರ್.ಪಿ ಮುತ್ತು ಬಳ್ಳಾ ಮಾತನಾಡಿ ಮುನಿಪುಂಗವ,ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ವಾಲ್ಮೀಕಿ ಒಂದು ರೀತಿಯಲ್ಲಿ ಸರ್ವತೋಮುಖ ಚಿಂತಕ,ಚರಿತ್ರೆಕಾರ,ಸಮಾಜ ಸುಧಾರಕ,ಶಿಕ್ಷಣ ತಜ್ಞ, ರಾಜ್ಯನೀತಿಜ್ಞ, ತತ್ವಜ್ಞಾನಿ,ಶೋಷಿತರ ನೇತಾರ,ಕವಿಯಾಗಿ ವೈವಿಧ್ಯಮಯವಾಗಿ ಸರ್ವಜನರನ್ನು ಮನಸೂರೆಗೊಂಡಿದ್ದಾರೆ. ರಾಮಾಯಣದ ಮೂಲಕ ಭಾರತದ ಜನಜೀವನವನ್ನು ಅರ್ಥೈಸಬೇಕಾದ ಅನಿವಾರ್ಯತೆ ಇಂದಿನದಾಗಿದೆ.ವಾಲ್ಮೀಕಿ ಬೇಟೆಗಾರರ ಬುಡಕಟ್ಟು ಸಮುದಾಯಕ್ಕೆ ಸೇರಿದ ಬೇಡ ಕುಲ ತಿಲಕ.ವಾಲ್ಮೀಕಿ ಬೇಡನಾಗಿದ್ದರಿಂದ ಕಳ್ಳ ಕೊಲೆಗಾರ ಎಂದು ಹಲವರು ಬಿಂಬಿಸಿದ್ದಾರೆ.ಆತ ಕಳ್ಳ ಮತ್ತು ಕೊಲೆಗಾರನಾಗಿದ್ದರೆ ಈ ಮಹಾಕಾವ್ಯ ಬರೆದು ಆದಿಕವಿ ಸ್ಥಾನಕ್ಕೇರಕು ಸಾಧ್ಯವಾಗುತ್ತಿತ್ತೇ.? ಎಂದರು.

ಈ ಸಂದರ್ಬಿಭದಲ್ಲಿ ಆರ್.ಪಿ.ಗಳಾದ,ಹುಗಾರ, ರಾವಸಾಹೇಬ ದೇಸಾಯಿ, ಜ್ಯೋತಿ ಮುಳ್ಳೂರ, ಬಿ.ಇ.ಆಯ್.ಆರ್.ಟಿ ಯ ಆರ್.ಎಂ ಜಾಲಿಹಾಳ ಎಸ್.ಬಿ.ಮೇಟಿ   ಸಿ.ಆರ್.ಪಿ.ಗಳಾದ  ಪ್ರಕಾಶ ಭಜಂತ್ರಿ,ಮಂಜುನಾಥ ಹೆಡಗಿ, ಪ್ರಕಾಶ ಕೋಟಿ, ಪಿ.ಎಫ್.ಸನ್ನಿ, ಕಮಲಾಕ್ಷಿ ಕುಂಟೋಜಿ, ಹಸ್ಮತ್,  ಕಛೇರಿ ಸಿಬ್ಬಂದಿಗಳಾದ ಸವಿತಾ ಓಜುಗ,ಇತರರಿದ್ದರು‌.ಬಿ.ಆರ್.ಪಿ.ಹುಗಾರ ನಿರೂಪಿಸಿದರು, ಜ್ಯೋತಿ ಮುಳ್ಳೂರ ವಂದಿಸಿದರು. 


ವರದಿ ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!