ನಾಯಿಗಳ ವತ೯ನೆಯ ಅಪಾಯಕಾರಿ

 


ವಿಶ್ವ ರೇಬಿಸ್ ದಿನ

ನಾಯಿಗಳ ಅಪಾಯಕಾರಿ ವತ೯ನೆಯ ಬಗ್ಗೆ ಪಾಲಕರಿಗಾಗಲಿ,ಮಕ್ಕಳಿಗಾಗಲಿ, ತಿಳವಳಿಕೆ ಇಲ್ಲದಿರುವುದೇ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣ ಎಂದು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಎಫ್.ಮಾಯಾಚಾರಿ ಹೇಳಿದರು 


ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ಬಾಗಲಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ ವತಿಯಿಂದ ಶಿರೂರ ಪಟ್ಟಣದ ಇಂದ್ರಾನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾಯ೯ಕ್ರಮದಲ್ಲಿ ಮಾನವರು ಮತ್ತು ಪ್ರಾಣಿಗಳ ಮೇಲೆ ರೇಬಿಸ್ ಪ್ರಭಾವದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ ಅಪಾಯದಲ್ಲಿರುವ ಸಮುದಾಯಗಳಲ್ಲಿ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ಕುರಿತು ಮಾಹಿತಿ ಮತ್ತು ಸಲಹೆಗಳನ್ನು ಒದಗಿಸುವುದು ಮತ್ತು ರೇಬಿಸ್ ನಿಯಂತ್ರಣದಲ್ಲಿ ರೇಬಿಸ್ ಬಗ್ಗೆ ತಿಳಿಯದವರಿಲ್ಲ ಎಷ್ಟು ಅಪಾಯಕಾರಿಯೇ ಅಷ್ಟೇ ಭಯಾನಕ ರೋಗ ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವಷ೯ ಸೆಪ್ಟೆಂಬರ್ 28 ರಂದು ವಿಶ್ವ ರೇಬಿಸ್ ದಿನವನ್ನು ಆಚರಿಸಲಾಗುತ್ತದೆ 


ನಾಯಿ ಕಡಿತಕ್ಕೆ ಸಾಮಾನ್ಯವಾಗಿ ಒಳಗಾಗುವವರಲ್ಲಿ ಅಧ೯ಕ್ಕಿಂತ ಹೆಚ್ಚು ಮಂದಿ 5 ರಿಂದ 15 ವಷ೯ದೊಳಗಿನ ಮಕ್ಕಳೆ ಜಾಸ್ತಿ ಶ್ವಾನಗಳಿಂದ ಮನುಷ್ಯನಿಗೆ ರೇಬಿಸ್ ಹರಡುವುದನ್ನು 2030 ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ ರೇಬಿಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ ರೇಬಿಸ್ ಕಾಯಿಲೆ ಹರಡಲು ಲಿಸ್ಸಾವೈರಸ್ ಮುಖ್ಯ ಕಾರಣವಾಗಿದೆ


ಲಾಲರಸದ ಸಂಪಕ೯ದಿಂದ ಹಾಗೂ ಸಸ್ತನಿಗಳು ಮತ್ತು ವಿಶೇಷವಾಗಿ ಪ್ರಾಣಿಗಳ ಮೂಲಕ ಈ ಸೊಂಕು ಹರಡುತ್ತದೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದನ್ನು ಗುಣಪಡಿಸಬಹುದಾಗಿದ್ದು ಇಲ್ಲವಾದಲ್ಲಿ ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮೆದುಳಿಗೆ ಘಾಸಿಯಾಗಿ ಸಾವು ಸಂಬವಿಸಬಹುದು.

 ನಿಮ್ಮ ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಿ ನಾಯಿ ಕಡಿತವನ್ನು ತಡೆಗಟ್ಟಿ ರೇಬಿಸ್ ತಡೆಯಿರೀ ಎಂದೂ ಹೇಳಿದರು. 2024 ರ ಘೋಷಣೆ.    

"ರೇಬಿಸ್ ಗಡಿಗಳನ್ನು ಮೀರಿ ಮುಂದುವರಿಯೋಣ" ಕಾಯ೯ಕ್ರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಎಸ್.ಎಸ್.ಮೆಣಸಗಿ ಹಿರಿಯರಾದ, ಹುಲಿಗೆಪ್ಪ.ಗಂಟ್ಟಿ,ಗುರಪ್ಪ.ಬಿತ್ತಾಳೆ ,ಆಶಾ ಕಾಯ೯ಕತೆ೯ಯರಾದ, ಲಕ್ಷ್ಮಿ.ಗೌಡರ,ವಿಜಯಲಕ್ಷ್ಮೀ. ಸೂಳಿಭಾವಿಮಠ,ಸುಮಾ.ಗಾಳಿ ಮತ್ತು ಇಂದ್ರಾನಗರದ,ಹಿರಿಯರು, ಯುವಕರು ಬಾಗವಹಿಸಿದ್ದರು.


ವರದಿ ಶಂಕರ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!