ಅಹಿಂಸಾತ್ಮಕ ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿಜೀಯವರು

 


ಮಹಾತ್ಮ ಗಾಂಧಿಜೀ ಅವರ ಜಯಂತಿಯನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ, ಇದು ಸ್ವಾತಂತ್ರ್ಯಕ್ಕಾಗಿ ಭಾರತದ ಅಹಿಂಸಾತ್ಮಕ ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಸೂಚಿಸುತ್ತದೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಹಾತ್ಮ ಗಾಂಧೀಜಿ ಅವರು ಕಂಡ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರು ಭಾರತದ ಎರಡನೇ ಪ್ರಧಾನ ಮಂತ್ರಿಗಳು ಅವರ ಸರಳ ಪ್ರಾಮಾಣಿಕ ದಿಟ್ಟ ನೇರ ಆಡಳಿತವನ್ನು ನೀಡಿದರು ಎಂದು ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷ ರಮೇಶ್ ಜಮಖಂಡಿ ಹೇಳಿದರು

ಅವರು ಕಮತಗಿಯ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಗಾಂಧೀಜಿಯವರ ಮತ್ತು ಲಾಲಬಹದ್ದೂರ್ ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪೂಜೆಸಲ್ಲಿಸುವುದರ ಮುಖಾಂತರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯನ್ನು ಆಚರಿಸಲಾಯಿತು ಮತ್ತು ಪಟ್ಟಣದ ಯೋಧ ನಾಗೇಶ್ ಜಪಾಳ ಅವರ ಸ್ಮಾರಕದ ಹತ್ತಿರದ ಜಾಗವನ್ನು ಶುಚಿಗೊಳಿಸುವುದರ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಗಾಂಧೀಜಿಯವರ ಕನಸು ಸ್ವಚ್ಛ ಗ್ರಾಮ ಕನಸನ್ನು ಸಾಕಾರಗೊಳಿಸಲು ಶ್ರಮದಾನ ಮಾಡಿವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿದರು

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಮೇಶ್ ಜಮಖಂಡಿ ಹಾಗೂ ಪಟ್ಟಣ ಪಂಚಾಯತ ಸದಸ್ಯರಾದ ದೇವಿ ಪ್ರಸಾದ್ ನಿಂಬಲಗುಂದಿ ಪ್ರಕಾಶ ಸಿನ್ನೂರ ಸಂಗಪ್ಪ ಗಾಣಿಗೇರ ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಎಫ್ ಎನ್  ಹುಲ್ಲಿಕೇರಿ ಆಡಳಿತಾಧಿಕಾರಿ ರಮೇಶ್ ಪದಕಿ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪೌರಕಾರ್ಮಿಕರು ಹಾಜರಿದ್ದರು

ಶ್ರೀ ಶಾಕಾಂಬರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ

ಕಮತಗಿ ಪಟ್ಟಣದ ಶ್ರೀ ಶಾಕಾಂಬರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಾಂಧೀಜಿ ಜಯಂತಿಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜಯಂತಿಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ ಎಲ್ ನಾಯಕ್ ಉಪನ್ಯಾಸಕರಾದ ಭಜಂತ್ರಿ ಮತ್ತು ಧೂಪದ ಸೇರಿದಂತೆ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


ವರದಿ ಶಂಕರ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!