ಸ್ವಚ್ಛ ಸವೇ೯ಕ್ಷಣಾ ವಿಶೇಷ* *ಜನಾಂದೋಲನ



ಖಡಕ್ ಕನ್ನಡ ನ್ಯೂಸ್  ವರದಿ ಶಂಕರ್ ವನಕಿ ಕಮತಗಿ

    ಸ್ವಚ್ಛ ಸವೇ೯ಕ್ಷಣಾ ವಿಶೇಷ ಜನಾಂದೋಲ ಪ್ಲಾಸ್ಟಿಕ್ ಕೊಳೆಯದವಸ್ತು ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಸಹ ಇಂದು ಪ್ರತಿ ಮನುಷ್ಯನಿಗೆ ಆರೋಗ್ಯಕ್ಕೆ ಉತ್ತಮವಾದ ಪರಿಸರ ಅವಶ್ಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಎಫ್.ಮಾಯಾಚಾರಿ ಹೇಳಿದರು 

 ಜಿಲ್ಲಾಡಳಿತ ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ, ಪಟ್ಟಣ ಪಂಚಾಯತ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಮತ್ತು ಎನ್.ಎಸ್.ಎಸ್.ಘಟಕ ಎಸ್.ಎನ್.ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ ಇವರ ಸಹಯೋಗದಲ್ಲಿ

  ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ನೀಲಾನಗರದ ದುಗಾ೯ದೇವಿ ದೇವಸ್ಥಾನ ಮುಂದಿನ ಆವರಣವನ್ನು ಸ್ವಚ್ಛಗೊಳಿಸುವ ಕಾಯ೯ಕ್ರಮದಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಸ್ವಚ್ಛತೆ ಆಗಬೇಕಾದರೆ ಪ್ರತಿಯೊಬ್ಬರು ಮನೆಗಳಲ್ಲಿ ಪ್ಲಾಸ್ಟಿಕ್ ಬಳಿಕೆಯನ್ನು ನಿಲ್ಲಿಸಲು ಪಣತೊಡಬೇಕಾಗಿದೆ ಅಡುಗೆ ಮನೆಯ ಸಾಮಗ್ರಿಗಳು ಪ್ಲಾಸ್ಟಿಕ್ ಮಯವಾಗುದನ್ನು ನಿಲ್ಲಿಸಬೇಕು ಪ್ಲಾಸ್ಟಿಕ್ ವಸ್ತುಗಳು ಬಿಸಾಡಿದರೆ ಅದು ಮಣ್ಣಿನಲ್ಲಿ ಕೊಳೆಯುವುದಿಲ್ಲ ಪ್ರತಿ ದಿನವೂ ನಮ್ಮ ಸುತ್ತ ಪ್ಲಾಸ್ಟಿಕ್ ಬ್ಯಾಗ್ ಗಳು ಬಾಟಲ್ ಆಹಾರದ ಕಂಟೈನರ್ ಕಾಫಿ ಟೀ ಕಪ್ಪುಗಳು ಮಣ್ಣಿನಲ್ಲಿ ಬೆರೆತರೆ ಮಣ್ಣು ಕೂಡಾ ಹಾಳಾಗುತ್ತದೆ

 ಮಣ್ಣಿನಲ್ಲಿ ಕೊಳೆಯುವುದಿಲ್ಲ ನಮ್ಮ ಹಿಂದಿನ ಪೀಳಿಗೆ ಕೊಟ್ಟ ಪರಿಸರವನ್ನು ಕಾಪಾಡಿ ಶುದ್ದವಾಗಿ ಮುಂದಿನ ಪೀಳಿಗಿಗೆ ನೀಡಬೇಕು ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಬೇಕು ಎಂದು ಮಾತನಾಡಿದರು



 ನಂತರ ಸ್ವಚ್ಛತೆಯ ಪ್ರತಿಜ್ಞೆಯನ್ನು ಭೋದಿಸಿದರು ಕಾಯ೯ಕ್ರಮದಲ್ಲಿ ದೇವಸ್ಥಾನದ ಅಚ೯ಕರಾದ ನಾಗೇಶ ಪೂಜಾರಿ ರವರು ಕಾಯ೯ಕ್ರಮಕ್ಕೆ ಚಾಲನೆ ನೀಡಿ ಗ್ರಾಮ ಪಟ್ಟಣ ಸ್ವಚ್ಚವಾಗಿಟ್ಟು ಕೊಳ್ಳುಲು ಸಾವ೯ಜನಿಕರು ಪಟ್ಟಣ ಪಂಚಾಯತಿಯೊಂದಿಗೆ ಸಹಕರಿಸಬೇಕು ಮನೆಯಲ್ಲಿಯ ಕಸವನ್ನು ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು ಚರಂಡಿ ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು ಎಂದು ಮಾತನಾಡಿದರು

ಈ ಕಾಯ೯ಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಎಸ್ ಎಸ್ ಮೇಣಸಗಿ ಈರಪ್ಪ ಪೂಜಾರಿ ದೇಸಾಯಿ ಲಮಾಣಿ ಪಟ್ಟಣ ಪಂಚಾಯಿತಿಯ ದಪೆದಾರ ಎಚ್ ಐ ಮ್ಯಾಗೇರಿ ಮತ್ತು ಪೌರಕಾಮಿ೯ಕರು ಹಾಗೂ ಎನ್.ಎಸ್.ಎಸ್.ಘಟಕ ಎಸ್ ಎನ್ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ ಇಂಟನ್೯ ವೈದ್ಯರು ಸಿಬಂದಿಗಳಾದ ಸಂತೋಷಕುಮಾರ ಕೊತಿ೯ ಈರಣ್ಣ ಬಿದರಿ ಪಟ್ಟಣದ ಸಾವ೯ಜನಿಕರು ಬಾಗವಹಿಸಿದ್ದರು

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!