ಬಾಗಲಕೋಟೆಗೆ ಕನ್ನಡ ಜ್ಯೊತಿ ರಥಯಾತ್ರೆ

ಬಾಗಲಕೋಟೆ ಜಿಲ್ಲೆಗೆ ಆಗಮಿಸಿರುವ ಕನ್ನಡ ಜ್ಯೊತಿ ರಥಯಾತ್ರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಾಗಲಕೋಟ ಜಿಲ್ಲೆಗೆ ಆಗಮಿಸಿರುವ ಕನ್ನಡ ಜ್ಯೊತಿ ರಥಯಾತ್ರೆ ಸೋಮವಾರ ಜಿಲ್ಲಾಡಳಿತಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅದ್ದೂರಿಯಾಗಿ ಬರಮಾಡಿಕೊಂಡರು. 

ಹುಟ್ಟಿನಿಂದಲೂ ನಾವು ಕನ್ನಡಿಗರಾಗಿದ್ದು, ನಮ್ಮ ಉಸಿರು ಇರುವವರೆಗೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. 


ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಗೆ ಆಗಮಿಸಿರುವ ಕನ್ನಡ ಜ್ಯೊತಿ ರಥಯಾತ್ರೆ ಸೋಮವಾರ ಜಿಲ್ಲಾಡಳಿತಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಕನ್ನಡ ಜ್ಯೋತಿಯನ್ನು ಬೆಳೆಗಿಸಿ ಮಾತನಾಡಿದ ಅವರು ಕನ್ನಡ ನಮಗೆಲ್ಲ ಕೊಟ್ಟಿದೆ. ನಾವು ಏನು ಕೊಟ್ಟಿದ್ದೇವೆ ಎಂದು ಕನ್ನಡಿಗರು ಅರ್ಥ ಮಾಡಿಕೊಂಡು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ಪರಂಪರೆ ಬೆಳವಣಿಗೆಗೆ ಎಲ್ಲರೂ ಕೈಜೋಡಿಸುವ ಕಾರ್ಯವಾಗಬೇಕು ಎಂದರು.

               ಕನ್ನಡ ಭಾಷೆಯ ಸೊಗಡು, ಸೊಬಗು ನಮ್ಮ ಜೊತೆಯಲ್ಲಿ ಇರಬೇಕು. ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಎಲ್ಲರೂ ಪಾಲ್ಗೊಂಡು ಕನ್ನಡದ ಕಂಪನ್ನು ಬೀರುವ ಕೆಲಸವಾಗಬೇಕು. ಈ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರದಲ್ಲಿ ಸಂಭ್ರಮದಿಂದ ಸ್ವಾಗತಿಸುವ ಕಾರ್ಯ ನಡೆಯಲಿ ಎಂದರು.

ವರದಿ ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!