ಕಮತಗಿ - ವಿದ್ಯಾರ್ಥಿಗಳಲ್ಲಿ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧನೆಯ ಬೆನ್ನತ್ತಿ ನಾವು ಹೋಗಬೇಕು ಸದೃಢವಾದ ಶಿಕ್ಷಣವನ್ನು ಪಡೆಯಲು ಸದೃಢವಾದ ದೇಹವನ್ನು ಹೊಂದಿರಬೇಕು ಅದಕ್ಕಾಗಿ ಯೋಗ ವ್ಯಾಯಾಮ ಹಾಗೂ ಸಮಗ್ರವಾದ ಶಿಕ್ಷಣ ಅವಶ್ಯವಾಗಿದೆ ಆದಕಾರಣ ಇಂದಿನ ವಿದ್ಯಾರ್ಥಿಗಳು ಮೊಬೈಲಗೀಳಿಗೆ ಬೀಳದೆ ಶಿಕ್ಷಣಕ್ಕೆ ಒತ್ತು ಕೊಡಬೇಕು
ಎಂದು ಸಹಾಯಕ ದೈಹಿಕ ನಿರ್ದೇಶಕ ಉಪನ್ಯಾಸಕ ಎಸ್ ವಿ ಚಳಗೇರಿ ಅಭಿಪ್ರಾಯಪಟ್ಟರು. ಅವರು ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಹಾಗೂ ಶ್ರೀ ಹುಚ್ಚೇಶ್ವರ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನಾ ಮತ್ತು ಬಿ,ಎ. ಬಿ,ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿದರು.
ಮಹಾವಿದ್ಯಾಲಯದಿಂದ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯತ ಅಧ್ಯಕ್ಷ ಬಸವರಾಜ ಕುಂಬಳಾವತಿ ಯಾವುದೇ ಒಬ್ಬ ವ್ಯಕ್ತಿ ಪ್ರಪಂಚವನ್ನು ಆಳಬೇಕಾದರೆ ಅವನಿಗೆ ಶಿಕ್ಷಣ ಅವಶ್ಯಕತೆ ಆ ಶಿಕ್ಷಣದ ಒಂದು ಅವಿಭಾಜ್ಯ ಅಂಗವೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅದರಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಹುಚ್ಚೇಶ್ವರ ಶ್ರೀಗಳು ಅಜ್ಞಾನದಿಂದ ಸುಜ್ಞಾನದೆಡೆಗೆ ಬರಬೇಕಾದರೆ, ವಿದ್ಯಾರ್ಥಿಗಳು ಒಳ್ಳೆ ಸುಶೀಕ್ಷಿತರಾಗಬೇಕು ಎಂದು ಆಶೀರ್ವಚನ ನೀಡಿದರು .
ಮಹಾವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಂಗೀತಾ ಗಡೇದಗೌಡ್ರ, ಪ್ರೀತಿ ಕಂಬಾರ ಇವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ರೇವಣೆಪ್ಪ ಭಾಪ್ರಿ, ಎಮ್, ಬಿ, ಶಾಬಾದಿ, ಶಿವಬಸಪ್ಪ ಗುರಿಕಾರ, ಆಡಳಿತಾಧಿಕಾರಿ ಅನೀಲಕುಮಾರ ಕಲ್ಯಾಣಶೆಟ್ಟಿ ಸೇರಿದಂತೆ ಬಿ.ಎ ಬಿ. ಕಾಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು
ಪ್ರಾಚಾರ್ಯರಾದ ಡಾ. ಪ್ರಭುಲಿಂಗಯ್ಯ ಗುರುವಿನಮಠ ಸ್ವಾಗತಿಸಿದರು, ಡಿ ಆರ್ ಕುಬಸದ ಪರಿಚಯಿಸಿದರು, ಎಂ ಎಂ ಪಾಟೀಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು,
ಆರ್, ಜೆ, ಚಿತ್ತವಾಡಗಿ, ಕೆ, ಜೆ, ಅಂಗಡಿ, ನಿರೂಪಿಸಿದರು, ಜೆ, ಆರ್, ಬಾದವಾಡಗಿ, ವಂದಿಸಿದರು.
✍️ ಶಂಕರ್ ವನಕಿ ಕಮತಗಿ. (ಬಾಗಲಕೋಟ)