ಬಿ. ಎಡ್. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ



ಖಡಕ್ ಕನ್ನಡ ಡಿಜಿಟಲ್ ಡೆಸ್ಕ 


ಕಮತಗಿ - ಶಿಕ್ಷಕರು ಸಮಾಜ ಶಿಲ್ಪಿಗಳು ಭಾರತದ ಸಂಸ್ಕೃತಿಯ ರಾಯಭಾರಿಗಳು, ಮತ್ತು ರೂವಾರಿಗಳು ಅವರ ಶ್ರೇಷ್ಠ ಜವಾಬ್ದಾರಿ ವಿದ್ಯಾರ್ಥಿಗಳ ಏಳಿಗೆಗೆ ದುಡಿಯುವ ಜೀವಿಗಳಾಗಿದ್ದಾರೆ ಎಂದು ಹುಚ್ಚೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ವಿ ಬಾಗೇವಾಡಿ ಅಭಿಪ್ರಾಯಪಟ್ಟರು. ಅವರು ಶ್ರೀಮತಿ ಯೋಗಿನಿದೇವಿ ಆರ್ ಪಾಟೀಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪಿ. ಆಯ್. ಮೋಮಿನ್ ವಹಿಸಿದ್ದರು. ವಿದ್ಯಾರ್ಥಿಗಳಿಂದ ಮೆಚ್ಚುವಂತ ಶಿಕ್ಷಕರಾದರೆ ಮಾತ್ರ ನಿಜವಾದ ಶಿಕ್ಷಕರಾಗಲು ಅರ್ಹರು, ಪ್ರಶಿಕ್ಷಣಾರ್ಥಿಗಳು ಮುಂದಿನ ಭಾವಿಶಿಕ್ಷಕರು ನಿಮ್ಮ ಶಿಕ್ಷಕ ವೃತ್ತಿಯು ಉಜ್ವಲವಾಗಿರಲೆಂದು ಹೇಳಿದರು. 

 ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎ ಎಚ್ ಮಲಘಾನ, ಜಿ ಎಲ್ ವಾಲಿಕಾರ, ವೈ.ಎಚ್,ಕಂಬಳಿ, ಎಂ.ಎನ್. ಕದಾಂಪುರ, ಅನುಪಮಾ, ಹೆಬ್ಬಳ್ಳಿ ಭಾರತಿ, ಸಜ್ಜನ್ ಜೆ, ಎಂ ಜಾಪಾಳ, ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಬಿ,ಈಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು 

 ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳಾದ ಸಂಗಮ್ಮ ಸಜ್ಜನ ನಿರೂಪಿಸಿದರು, ಕಾವ್ಯ ಕಾಟವಾ ಪ್ರಾರ್ಥಿಸಿದರು, ಸುಧಾ ಗೌಡರ, ವಂದಿಸಿದರು.


✍️ ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು