ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಕಾಶಿ ಪಂಡಿತವರೇಣ್ಯ ಶ್ರೀ ಮ. ನಿ.ಪ್ರ.ಲಿಂ.10ನೇ ಹುಚ್ಚೇಶ್ವರ ಮಹಾಸ್ವಾಮಿಗಳವರ
107ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪುರಾಣ-ಪ್ರವಚನ
ದಿನಾಂಕ:22-09-2025 ಸೋಮವಾರ ದಿಂದ 02-10-2025 ಗುರುವಾರದ ವರೆಗೆ
ಪ್ರತಿದಿನ ಸಾಯಂಕಾಲ 7-00 ಘಂಟೆಗೆ ಜರುಗಲಿದೆ.
ಕಮತಗಿ-ಕೋಟೆಕಲ್ಲ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಪೀಠಾಧಿಪತಿಗಳಾದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು
ಇವರ ಅಪ್ಪಣೆಯ ಮೆರೆಗೆ
22 ರಂದು ಸಂಜೆ 7. ಗಂಟೆಗೆ
ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭದ
ದಿವ್ಯ ಸಾನಿಧ್ಯವನ್ನು
ಶ್ರೀ ಶಂಕರರಾಜೇಂದ್ರ ಮಹಾಸ್ವಾಮಿಗಳು ಶ್ರೀ ಪ್ರಭು ಶಂಕರೇಶ್ವರಮಠ, ಅಮೀನಗಡ ಇವರು ವಹಿಸುವರು.
ಅಧ್ಯಕ್ಷತೆಯನ್ನು
ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸೋಮಶೇಖರಮಠ, ಮುನವಳ್ಳಿ ಇವರು ವಹಿಸುವರು
ಉದ್ಘಾಟಣೆಯನ್ನು ಶ್ರೀ ಕಾಶೀನಾಥ ಮಹಾಸ್ವಾಮಿಗಳು ಮುರಘಾಮಠ, ಗುಳೇದಗುಡ್ಡ ಇವರು ನೆರವೇರಿಸುವರು.
ಶ್ರೀ ಶಿವಕುಮಾರ ಶಿವಾಚಾರ್ಯಯರು ಹಿರೇಮಠ, ಕಮತಗಿ.
ಮಾತ್ರೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ ಕಮತಗಿ.
ಇರಲಿದ್ದಾರೆ
ಪುರಾಣ ಪ್ರವಚನವನ್ನು ಶ್ರೀ ಸಂಗಮೇಶ್ವರ ಶರಣರು ಕೊಡೇಕಲ್ಲ ಅವರಿಂದ ಜರುಗಲಿದೆ.
ಪ್ರತಿದಿನದ ಸಂಗೀತ ಸೇವೆಯನ್ನು Children ಹೂಗಾರ ಗವಾಯಿಗಳು ಕಮತಗಿ ಬಸವರಾಜ ಜಿಡಗಿ ತಬಲಾ ವಾದಕರು-ಗುಳೇದಗುಡ್ಡ ಇವರಿಂದ ಜರುಗಲಿದೆ
22 ರಂದು 10ನೇ ಶ್ರೀಗಳವರ ಜನನ ಹಾಗೂ ತೊಟ್ಟಿಲು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಶ್ರೀ ಬೂದೀಶ್ವರ ಮಹಾಸ್ವಾಮಿಗಳು, ಬೂದೀಶ್ವರ ಸಂಸ್ಥಾನಮಠ, ಹೊಸಳ್ಳಿ ಅವರು ವಹಿಸುವರು ಅಧ್ಯಕ್ಷತೆಯನ್ನು ಡಾ. ಕೊಟ್ಟೂರು ಮಹಾಸ್ವಾಮಿಗಳ ಕಲ್ಮಠ, ಗಂಗಾವತಿ ಇವರು ವಹಿಸುವರು.
26 ರಂದು ಬೆಳಿಗ್ಗೆ 9.30 ಘಂಟೆಗೆ ಹುಚ್ಚೇಶ್ವರ ಅಕ್ಕನ ಬಳಗದ
29 ನೇ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಶ್ರೀ ಮೂರುಸಾವಿರ ವಿರಕ್ತಮಠ, ಉಪ್ಪಿನ ಬೆಟಗೇರಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಡಾ. ನೀಲಕಂಠ ಮಹಾಸ್ವಾಮಿಗಳು. ಅಮರೇಶ್ವರಮಠ, ಕೊಟೇಕಲ್-ಗುಳೇದಗುಡ್ಡ. ಇವರು ವಹಿಸುವರು
27ರಂದು ಸಂಜೆ 7 ಘಂಟೆಗೆ ಶ್ರೀ ಹುಚ್ಚೇಶ್ವರ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕಮತಗಿ. ಇದರ
27 ನೇ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು
ಶ್ರೀ ಹುಚ್ಚೇಶ್ವರ ಸಂಸ್ಥಾನಮಠ ಕಮತಗಿ-ಕೋಟೆಕಲ್ಲ ಇವರು ವಹಿಸುವರು.
ಅಧ್ಯಕ್ಷತೆಯನ್ನು ಡಾ. ಅಮರಸಿದ್ದೇಶ್ವರ ಮಹಾಸ್ವಾಮಿಗಳು ಅಡವಿ ಸಿದ್ದೇಶ್ವರಮಠ, ಕುಂದರಗಿ-ಅಂಕಲಗಿ ಇವರು ವಹಿಸುವರು
ಶ್ರೀ ಯಲ್ಲಪ್ಪ ಶ. ಬೈಲಕೂರ ಸಾ।। ಬಸನಾಳ DySP, ಬೀದರ. ಲಕ್ಷ್ಮಣ ಸಿ.ಕಕ್ಕಣವರ ಸಾ।। ಕಮತಗಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಇವರಿಗೆ ಸತ್ಕರಿಸಲಾಗುವುದು ಹಾಗೂ 02 ರಂದು ಗುರುವಾರ ದಶಮಿ ಪ್ರಾಥಕಾಲ 5 ಘಂಟೆಗೆ
ಅಯ್ಯಾಚಾರ ಮತ್ತು ಶಿವದೀಕ್ಷೆ ಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು
ಗುಳೇದಗುಡ್ಡ-ಮುಳ್ಳೂರ ಇವರ ಅಮೃತ ಹಸ್ತದಿಂದ ಮುಂಜಾನೆ 8-00 ಘಂಟೆಗೆ 10 ನೇ ಶ್ರೀಗಳವರ ಭಾವಚಿತ್ರ ಮೆರವಣಿಗೆ ನಂತರ ಮಹಾಪ್ರಸಾದ ಮಧ್ಯಾಹ್ನ 1-00 ಘಂಟೆಗೆ ಜರುಗುವುದು
ಪುರಾಣ ಪ್ರವಚನ ಮಹಾಮಂಗಲ ಸಾಯಂಕಾಲ 7 ಘಂಟೆಗೆ 02 ರಂದು ಗುರುವಾರ ಬನ್ನಿ ಮುಡಿಯುವ ಮೂಲಕ ಸೀಮೋಲ್ಲಂಘನ ನಡೆಯುವುದು
ಶ್ರೀ ಮಠದಿಂದ “ಅಯ್ಯಾಚಾರ” ಮತ್ತು “ಶಿವದೀಕ್ಷೆ"ಮಾಡಲಾಗುವುದು. ಈ ಸೇವೆ ಪಡೆದುಕೊಳ್ಳಲಿಚ್ಚಿಸುವವರು ವೇ। ಹುಚ್ಚಯ್ಯ ಗಂಜಿಹಾಳ ಅವರ ಹತ್ತಿರ ಹೆಸರು ನೋಂದಾಯಿಸಲು ಶ್ರೀಮಠದ ಪ್ರಕಟಣೆ ತಿಳಿಸಿದೆ.
ವರದಿ - ಶಂಕರ್ ವನಕಿ ಕಮತಗಿ