ಶ್ರೀ ಬನಶಂಕರಿ ದೇವಿ ದೇವಸ್ಥಾನ, ಮತ್ತು ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ
2025 ನೇ ಸಾಲಿನ ವಿಶ್ವಾವಸು ನಾಮ ಸಂವತ್ಸರ ಅಶ್ವೀಜ ಮಾಸ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ, ಸಂಜೆ ಪುರಾಣ ಪ್ರವಚನ ಜರಗಲಿದೆ
ಶ್ರೀ ಬನಶಂಕರಿ ದೇವಸ್ಥಾನದಲ್ಲಿ ವೆಂಕಟೇಶ ಮುನವಳ್ಳಿ, ಶಂಕರ ವನಕಿ, ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ ಸಂಗಪ್ಪ ಕುಪ್ಪಸ್ತ, ಶಂಕ್ರಪ್ಪ ಶಿ ಹಳ್ಳದ ಶ್ರೀ ದೇವಿ ಪುರಾಣ ಪ್ರವಚಣ ನೀಡಲಿದ್ದಾರೆ.
ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಅಲಂಕಾರದ ವಿವರಗಳು
22/9/2025 ಸೋಮವಾರ ಆದಿಶಕ್ತಿ ಅಲಂಕಾರ, ಬೆಳಿಗ್ಗೆ 9.15 ರಿಂದ 11.55 ಘಟಸ್ಥಾಪಣೆ ಸಂಜೆ ಶ್ರೀದೇವಿ ಪುರಾಣ ಪ್ರಾರಂಭ
23/9/2025 ಮಂಗಳವಾರ ಅನ್ನಪೂರ್ಣೇಶ್ವರಿ ಅಲಂಕಾರ,
24/9/2025 ಬುಧವಾರ ಶ್ರೀ ಶೃಂಗೇರಿ ಶಾರದಾದೇವಿ ಅಲಂಕಾರ,
25/9/2025 ಗುರುವಾರ ಶ್ರೀ ಅಮ್ಮನವರಿಗೆ ಗೆಜ್ಜೆ ವಸ್ತ್ರದ ಅಲಂಕಾರ,
26/9/2025 ಶುಕ್ರವಾರ ಕೊಲ್ಹಾಪುರ ಮಹಾಲಕ್ಷ್ಮಿ ಅಲಂಕಾರ,
27/9/2025 ಶನಿವಾರ ಶ್ರೀ ಅಮ್ಮನವರಿಗೆ ಬಳೆ ಅಲಂಕಾರ,
28/9/2025 ರವಿವಾರ ಶ್ರೀ ಅಮ್ಮನವರಿಗೆ ನಿಂಬೆಹಣ್ಣಿ ಅಲಂಕಾರ,
29/9/2025 ಸೋಮವಾರ ಶ್ರೀ ಅಮ್ಮನವರಿಗೆ ವೀಳ್ಯದೆಲೆ ಅಲಂಕಾರ,
30/9/2025 ಮಂಗಳವಾರ ತುಳಜಾಭವಾನಿ ಅಲಂಕಾರ,
1/10/2025 ಬುಧವಾರ ಮಹಿಷಾಸುರ ಮರ್ದಿನಿ ಅಲಂಕರ,
2/10/2025 ಗುರುವಾರ ಹೂವಿನ ಅಲಂಕಾರ, ವಿಜಯದಶಮಿ, ಬೆಳಗ್ಗೆ 10 ಗಂಟೆಗೆ ಪ್ರತಿಭಾ ಪುರಸ್ಕಾರ ಮಧ್ಯಾಹ್ನ 3:00 ಗಂಟೆಗೆ ಪುರಾಣಮಂಗಲ ಸಂಜೆ 5:00 ಗಂಟೆಗೆ ಸೀಮೋಲಂಘನ
ನಂತರ ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ನವರಾತ್ರಿ ಮುಕ್ತಾಯಗೊಳ್ಳುವುದು ಎಂದು ದೇವಾಂಗ ಸಮಾಜದ ಅಧ್ಯಕ್ಷ ಪಾಂಡುರಂಗ ಹೋಟಿ ತಿಳಿಸಿದ್ದಾರೆ.
ಪ್ರತಿದಿನ ಅಲಂಕಾರ ಸೇವಿ ಸಲ್ಲಿಸಬಯಸುವವರು
ಶ್ರೀ ರಾಘವೇಂದ್ರ ಸ್ವಾಮಿ ದೇವಾಂಗ ಮಠ ಪ್ರಧಾನ ಅರ್ಚಕರು 9008787717 ಮತ್ತು ರಾಜು ಗಾಡದ 7204150525 ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ