ಕಮತಗಿ (ಶಿರೂರ) - ಇಂದಿನ ಜನತೆಯಲ್ಲಿ ಪೌಷ್ಟಿಕತೆ ಮತ್ತು ಆರೋಗ್ಯ ಬಗ್ಗೆ ಕಾಳಜಿ ಕಡಿಮೆಯಾಗುತ್ತದೆ ಮಹಿಳೆಯರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳಿದ್ದರೂ ಆರೋಗ್ಯದಿಂದರಲು ಸಾಧ್ಯವಾಗುತ್ತಿಲ್ಲ ನಾರಿಯರು ಶಕ್ತರಾದರೆ ನಮ್ಮ ಪರಿವಾರ ನಮ್ಮ ಸಮಾಜ ಶಕ್ತಿಯುತ್ತವಾಗುತ್ತವೆ ಎಂದು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ'ಅಶೋಕ ಡೋಲೆ೯ ರವರು ಹೇಳಿದರು,
ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟೆ ಪಟ್ಟಣ ಪಂಚಾಯತ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಂಯುಕ್ತ ಆಶ್ರಯದಲ್ಲಿ ಶಿರೂರ ಸಂತೆ ಬೈಲಿನ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಹಾಗೂ ನೇತ್ರ ತಪಾಸಣೆ ಶಿಬಿರದಲ್ಲಿ ಈ ಅಭಿಯಾನವು ಮಹಿಳೆಯರು ಆರೋಗ್ಯದ ಮಹತ್ವ ಮತ್ತು ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಆರೋಗ್ಯವಂತ ಮಹಿಳೆಯಿಂದ ಮಾತ್ರ ಸಶಕ್ತ ಸಮಾಜ ನಿಮಾ೯ಣ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು
ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಂಗಪ್ಪ ಮಳ್ಳಿ ರವರು ದೀಪ ಬೆಳಗಿಸುವುದರ ಮುಖಾಂತರ ಕಾಯ೯ಕ್ರಮಕ್ಕೆ ಚಾಲನೆ ನೀಡಿ ನಮ್ಮ ಪಟ್ಟಣದ ಸಾವ೯ಜನಿಕರು ಈ ಶಿಬಿರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಮಾತನಾಡಿದರು
ನಂತರ ನೇತ್ರ ತಜ್ಞರಾದ ಡಾ'ಆರತಿ ಚೌಧರಿ ರವರು ಮಹಿಳೆಯರು ಹದಿಹರೆಯದವರ ಮತ್ತು ಮಕ್ಕಳಿಗೆ ಆರೋಗ್ಯ ಮಾಹಿತಿ ನೀಡಿ ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚಲು ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ ಈ ಶಿಬಿರದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುತ್ತದೆ ಎಂದೂ ತಿಳಿಸಿದರು
ಸಂಯೋಜಕರಾದ ಡಾ'ಜಯರಾಜ ಮೇತ್ರಿ ಡಾ' ಶ್ರೀನಿವಾಸ ಪಾಟೀಲ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಎಫ್.ಮಾಯಾಚಾರಿ ಮಹಿಳೆಯರಿಗೆ ಹಿರಿಯರಿಗೆ ಹಾಗೂ ಹದಿಹರೆಯದವರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಪಾಸಣೆ ಪೌಷ್ಟಿಕತೆ ಮತ್ತು ನೈಮ೯ಲ್ಯದ ಬಗ್ಗೆ ಮಕ್ಕಳ ಲಸಿಕಾ ಸೌಲಭ್ಯಗಳ ಕುರಿತು ಆರೋಗ್ಯ ಸಮಾಲೋಚನೆ ಮತ್ತು ಜಾಗೃತಿ ಮೂಡಿಸಿ ಆರೋಗ್ಯವಂತ ಮಹಿಳೆ ಬಲಿಷ್ಠ ಕುಟುಂಬ ಎಂಬ ಸಂಕಲ್ಪ ದೊಂದಿಗೆ ಬಲಿಷ್ಠ ರಾಷ್ಟ್ರವನ್ನು ನಿಮಿ೯ಸೋಣ ಎಂದು ಆರೋಗ್ಯ ಅರಿವು ಮೂಡಿಸಿದರು
ಕಾಯ೯ಕ್ರಮದಲ್ಲಿ ಡಾ'ಚೇನಗೌಡ ಹನುಮಂತ ಚನ್ನದಾಸರ ಸಂತೋಷಕುಮಾರ ಕೋತಿ೯ ಈರಣ್ಣ ಬೀದರಿ ಎ ಬಿ ಪೂಜಾರಿ ಎಸ್ ಸಿ ಮಠಪತಿ ಎಚ್ ಐ ಮ್ಯಾಗೇರಿ ಇಂಟರ್ನ್ ವೈದ್ಯರು ಪೌರಕಾರ್ಮಿಕರು ಆಶಾ ಕಾರ್ಯಕರ್ತೆಯರು ಪಟ್ಟಣ ಪಂಚಾಯತ ಶಿವಗಂಗಾ ಆಸ್ಪತ್ರೆ ಸಿಬ್ಬಂದಿಗಳು ಪಟ್ಟಣದ ಗಣ್ಯರು ತಾಯಂದಿರು ಹಿರಿಯ ನಾಗರಿಕರು ಭಾಗವಹಿಸಿದ್ದರು ನಂತರ ಶಿಬಿರದಲ್ಲಿ 125 ಕ್ಕೂ ಹೆಚ್ಚು ಜನರ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು
✍️ ಶಂಕರ್ ವನಕಿ ಕಮತಗಿ, ಬಾಗಲಕೋಟ